
ಬೆಂಗಳೂರು: ಬೆಂಗಳೂರು ಮೈಸೂರು ನಡುವಿನ ಪ್ರಯಾಣದ ಅವಧಿಯನ್ನು ಅರ್ಧದಷ್ಟು ಕಡಿಮೆ ಮಾಡುವ ಬೆಂಗಳೂರು–ಮೈಸೂರು ದಶಪಥ ಹೆದ್ದಾರಿಯ ಮೊದಲ ಹಂತದ ಟೋಲ್ ಕೇಂದ್ರಗಳು ಇಂದಿನಿಂದ (ಸೋಮವಾರ) ಕಾರ್ಯಾರಂಭ ಮಾಡಲಿದ್ದು ಅಧಿಕೃತ ಉದ್ಘಾಟನೆಗೂ ಮುನ್ನವೇ ಪ್ರಯಾಣಿಕರಿಗೆ ಟೋಲ್ ಹೊರೆ ಬೀಳಲಿದೆ.
ಮಧ್ಯದ ಆರು ಪಥಗಳ ಎಕ್ಸ್ಪ್ರೆಸ್ ವೇನಲ್ಲಿ ಸಂಚರಿಸುವವರಿಗೆ ಈ ಟೋಲ್ ಅನ್ವಯ ಆಗಲಿದೆ. ಅಕ್ಕಪಕ್ಕದ ಎರಡು ಪಥಗಳ ಸರ್ವೀಸ್ ರಸ್ತೆಯಲ್ಲಿನ ಸಂಚಾರಕ್ಕೆ ಟೋಲ್ ಅನ್ವಯವಾಗುವುದಿಲ್ಲ. ಬೆಂಗಳೂರು ಬಳಿಯ ಕಣಮಿಣಕಿ ಬಳಿ ಟೋಲ್ ನಿರ್ಮಿಸಲಾಗಿದ್ದು, ಬೆಂಗಳೂರಿನಿಂದ ಮೈಸೂರು ಕಡೆಗೆ ಪ್ರಯಾಣಿಸುವವರು ಇಲ್ಲಿ ಟೋಲ್ ಶುಲ್ಕ ಕಟ್ಟಬೇಕು. ಮೈಸೂರು ಕಡೆಯಿಂದ ಬರುವವರು ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಬಳಿ ಇರುವ ಟೋಲ್ನಲ್ಲಿ ಟೋಲ್ ಕಟ್ಟಿ ಬೆಂಗಳೂರಿನತ್ತ ಸಾಗಬೇಕು.
ಬೇರೆ ಬೇರೆ ವಾಹನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ತಿಂಗಳ ಪಾಸ್ ಸೌಲಭ್ಯವೂ ಕೂಡ ಇರಲಿದೆ. ಟೋಲ್ ದರ ಈ ರೀತಿ ಇದೆ.
ಕಾರು ಜೀಪು ವ್ಯಾನ್ : ಏಕಮುಖ ಸಂಚಾರ 135 ರೂ. , ದ್ವಿಮುಖ ಸಂಚಾರ 205 ರೂ.
ಎಲ್ಜಿವಿ, ಎಲ್ಸಿವಿ, ಮಿನಿ ಬಸ್ : ಏಕಮುಖ ಸಂಚಾರ 220 ರೂ , ದ್ವಿಮುಖ ಸಂಚಾರ 330 ರೂ
ಟ್ರಕ್/ಬಸ್ : ಏಕಮುಖ ಸಂಚಾರ 460 ರೂ., ದ್ವಿಮುಖ ಸಂಚಾರ 690 ರೂ.
3 ಆಕ್ಸೆಲ್ ವಾಣಿಜ್ಯ ವಾಹನ: ಏಕಮುಖ ಸಂಚಾರ 500 ರೂ, ದ್ವಿಮುಖ ಸಂಚಾರ 750 ರೂ.
ನಮ್ಮ ವಾಟ್ಸಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ : https://chat.whatsapp.com/CMUDdTXoFVn7atm3zHYGrd












































