HomeKarnatakaಕರ್ನಾಟಕ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್, 52 ಅಚ್ಚರಿಯ ಹೊಸ ಮುಖಗಳು.

ಕರ್ನಾಟಕ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್, 52 ಅಚ್ಚರಿಯ ಹೊಸ ಮುಖಗಳು.

ನವದೆಹಲಿ: ಕರ್ನಾಟಕದ ವಿಧಾನ ಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಲು ಇನ್ನು ಎರಡು ದಿನಗಳು ಬಾಕಿ ಇರುವಂತೆಯೇ ಹಲವು ಸುತ್ತಿನ ಚರ್ಚೆ ಬಳಿಕ ಬಿಜೆಪಿ ಹೈಕಮಾಂಡ್ ಇಂದು ಸಂಜೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 224 ಕ್ಷೇತ್ರಗಳ ಪೈಕಿ ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. 35 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಹೈಕಮಾಂಡ್ ಕಾಯ್ದಿರಿಸಿದೆ.

ಇಂದು ಸಂಜೆ ದೆಹಲಿಯಲ್ಲಿ ನಡೆದ ಮಾಧ್ಯಮ ಘೋಷ್ಠಿಯಲ್ಲಿ ಬಿಜೆಪಿ ನಾಯಕರಾದ ಅರುಣ್ ಸಿಂಗ್, ಧರ್ಮೇಂದ್ರ ಪ್ರಧಾನ್, ಅಣ್ಣಾಮಲೈ ಸೇರಿದಂತೆ ಕರ್ನಾಟಕ ಬಿಜೆಪಿ ಪ್ರಭಾರಿ ಸಹ ಪ್ರಭಾರಿಗಳ ಸಮ್ಮುಖದಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದ್ದು ಬರೋಬ್ಬರಿ 52 ಹೊಸ ಮುಖಗಳಿಗೆ ಮನೆ ಹಾಕಲಾಗಿದೆ.

ಹಿಂದುಳಿದ ವರ್ಗಕ್ಕೆ 32, ಎಸ್ ಸಿ 30, ಎಸ್ ಟಿ 19, 9 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ.

ಡಿಕೆ ಶಿವಕುಮಾರ್ ವಿರುದ್ಧ ಆರ್ ಅಶೋಕ್ ಅವರನ್ನು ಕಣಕ್ಕೆ ಇಳಿಸಲಾಗಿದ್ದು ಅವರಿಗೆ ಪದ್ಮನಾಭನಗರ ಟಿಕೆಟ್ ಕೂಡ ನೀಡಲಾಗಿದೆ. ಸೋಮಣ್ಣ ಅವರಿಗೂ ಎರಡು ಟೆಕೆಟ್ ನೀಡಲಾಗಿದ್ದು ಸೋಮಣ್ಣ ಚಾಮರಾಜನಗರ ಹಾಗು ಸಿದ್ದರಾಮಯ್ಯ ವಿರುದ್ಧ ವರುಣದಲ್ಲಿ ಸ್ಪರ್ಧಿಸಲಿದ್ದಾರೆ.

ಟಿಕೆಟ್ ಪಡೆದವರ ವಿವರಗಳು ಇಂತಿವೆ ;

ಬಸವರಾಜ ಬೊಮ್ಮಾಯಿ : ಶಿಗ್ಗಾವಿ
ನಿಪ್ಪಾಣಿ: ಶಶಿಕಲಾ ಜೊಲ್ಲೆ
ಚಿಕ್ಕೋಡಿ: ರಮೇಶ್ ಕತ್ತಿ
ಅಥಣಿ : ಕುಮಟಲ್ಲಿ
ಕಾಗವಾಡ: ಶ್ರೀಮಂತ ಪಾಟೀಲ್
ಕುಡಚಿ: ರಾಜೀವ್
ರಾಯಭಾಗ: ಧುರ್ಯೋಧನ
ಹುಕ್ಕೇರಿ: ನಿಖಿಲ್ ಕಟ್ಟಿ
ಅರಭಾವಿ: ಬಾಲಚಂದ್ರ ಜಾರಕಿಹೊಳಿ
ಗೋಕಾಕ್: ರಮೇಶ್ ಜಾರಕಿಹೊಳಿ
ಬೆಳಗಾವಿ ದಕ್ಷಿಣ : ಅಭಯ್ ಪಾಟೀಲ್
ಮುಧೋಳ್ : ಗೋವಿಂದ್ ಕರಜೋಳ್
ತೇರದಾಳ್ : ಸಿದ್ದು ಸವದಿ
ಬೀಳಗಿ: ಮುರುಗೇಶ್ ನಿರಾಣಿ
ಬಿಜಾಪುರ ನಗರ: ಯತ್ನಾಳ್
ಆಫ್ಜಲ್ ಪುರ್ : ಮಾಲಿಕಯ್ಯ ಗುತ್ತೇದಾರ್
ಬಳ್ಳಾರಿ: ಬಿ ಶ್ರೀರಾಮುಲು
ಬಳ್ಳಾರಿ ನಗರ : ಸೋಮಶೇಖರ್ ರೆಡ್ಡಿ
ಶಿಕಾರಿ ಪುರ : ಬಿ ವೈ ವಿಜಯೇಂದ್ರ
ಹೊಸಪೇಟೆ: ಸಿದ್ದಾರ್ಥ್ ಸಿಂಗ್
ಉಡುಪಿ: ಯಶಪಾಲ್ ಸುವರ್ಣ
ಕಾಪು: ಗುರ್ಮೆ ಸುರೇಶ ಶೆಟ್ಟಿ
ಕಾರ್ಕಳ: ಸುನಿಲ್ ಕುಮಾರ್
ಚಿಕ್ಕಮಗಳೂರು: ಸಿಟಿ ರವಿ
ಕುಂದಾಪುರ : ಕಿರಣ್ ಕೊಡ್ಗಿ
ತುಮಕೂರು ನಗರ : ಜ್ಯೋತಿಗಣೆಶ್
ಕೋಲಾರ್: ವರ್ತೂರ್ ಪ್ರಕಾಶ್
ಯಲಹಂಕ: ಎಸ ಆರ್ ವಿಶ್ವನಾಥ್
ಆಳಂದ : ಸುಭಾಷ್ ಗುತ್ತೇದಾರ್
ಚಾಮರಾಜನಗರ : ಭಾಸ್ಕರ್ ರಾವ್
ಹೊಸಕೋಟೆ: ಎಂ ಟಿ ಬಿ ನಾಗರಾಜ್
ಶಿರಾ : ರಾಜೇಶ್ ಗೌಡ
ಕನಕಪುರ: ಆರ್ ಅಶೋಕ್ (ಎರಡು ಕ್ಷೇತ್ರ)
ರಾಜರಾಜೇಶ್ವರಿ ನಗರ: ಮುನಿರತ್ನ
ಮಲ್ಲೇಶ್ವರಂ: ಅಶ್ವಥ್ ನಾರಾಯಣ್
ಹಾಸನ: ಪ್ರೀತಮ್ ಗೌಡ
ಬೆಳ್ತಂಗಡಿ: ಹರೀಶ್ ಪೂಂಜಾ
ಮೂಡಬಿದ್ರೆ: ಉಮಾನಾಥ್ ಕೋಟ್ಯಾನ್
ಬಂಟ್ವಾಳ: ರಾಜೇಶ್ ನಾಯ್ಕ್
ಮಂಗಳೂರು ಉತ್ತರ : ಭರತ್ ಶೆಟ್ಟಿ
ಮಂಗಳೂರು ದಕ್ಷಿಣ : ವೇದವ್ಯಾಸ್ ಕಾಮತ್
ಮಂಗಳೂರು (ಉಳ್ಳಾಲ) : ಸತೀಶ್ ಕುಂಪಲ
ಸುಳ್ಯ: ಶ್ರೀಮತಿ ಭಾಗೀರಥಿ
ಪುತ್ತೂರು: ಶ್ರೀಮತಿ ಆಶಾ ತಿಮ್ಮಪ್ಪ
ವರುಣ: ವಿ ಸೋಮಣ್ಣ
ಸೊರಬ: ಕುಮಾರ್ ಬಂಗಾರಪ್ಪ
ತೀರ್ಥಹಳ್ಳಿ: ಆರಗ ಜ್ಞಾನೇಂದ್ರ
ಹೊನ್ನಾಳಿ: ರೇಣುಕಾಚಾರ್ಯ

ಸುದ್ದಿಯನ್ನು ನಿಮ್ಮ ವಾಟ್ಸಪ್ ನಲ್ಲಿ ಪಡೆಯಲು ನಮ್ಮ ಗುಂಪಿಗೆ ಸೇರಿರಿ https://chat.whatsapp.com/CMUDdTXoFVn7atm3zHYGrd

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments