HomePoliticalಲೋಕಸಭಾ ಚುನಾವಣೆ ಮತಭೇಟೆ: ಈ ತಿಂಗಳಾಂತ್ಯಕ್ಕೆ ಕರ್ನಾಟಕಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಭೇಟಿ

ಲೋಕಸಭಾ ಚುನಾವಣೆ ಮತಭೇಟೆ: ಈ ತಿಂಗಳಾಂತ್ಯಕ್ಕೆ ಕರ್ನಾಟಕಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಭೇಟಿ

ಬೆಂಗಳೂರು: ಲೋಕಸಭಾ ಚುನಾವಣೆ 2024 ಸನಿಹವಾಗುತ್ತಿದ್ದಂತೆ ಬಿಜೆಪಿ ಮತಬೇಟೆಗಾಗಿ ಭರ್ಜರಿ ಸಿದ್ಧತೆ ಆರಂಭಿಸಿದೆ. ಇದೇ ತಿಂಗಳಾಂತ್ಯಕ್ಕೆ ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭೇಟಿ ನೀಡಲಿದ್ದಾರೆಂದು ಗೊತ್ತಾಗಿದೆ.

ಎಂದಿನಂತೆ ಬಿಜೆಪಿಯೇ ಉಳಿದ ಪಕ್ಷಗಳಿಗಿಂತ ಚುನಾವಣೆ ತಯಾರಿಯಲ್ಲಿ ಮುಂದಿದ್ದು ಈಗಾಗಲೇ ಭಾರತೀಯ ಜನತಾ ಪಕ್ಷ 4 ಲೋಕಸಭೆ ಕ್ಷೇತ್ರಗಳಿಗೆ ಒಂದರಂತೆ ಎಂಟು ಕ್ಲಸ್ಟರ್ ಗಳನ್ನು ರಚಿಸಿದ್ದು, ಪ್ರಧಾನಿ ಮೋದಿ , ಅಮಿತ್ ಶಾ, ಜೆ,ಪಿ ನಡ್ಡಾ ಹಾಗೂ ರಾಜನಾಥ್ ಸಿಂಗ್ ತಲಾ 2 ಕ್ಲಸ್ಟರ್ ಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿಯ ಅಲೆಯ ಪರಿಣಾಮ ಬಿಜೆಪಿ ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಸ್ಥಾನಗಳಲ್ಲಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಗೆದ್ದ ಅಷ್ಟೂ ಸ್ಥಾನಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಹೆಚ್ಚಿವರಿ ಕ್ಷೇತ್ರಗಳನ್ನು ಗೆಲ್ಲಲು ಬಿಜೆಪಿ ಗೇಮ್ ಪ್ಲಾನ್ ರೂಪಿಸುತ್ತಿದೆ.

RELATED ARTICLES

ಪ್ರಮುಖ ಸುದ್ದಿಗಳು

Recent Comments