HomeNationalಅಯೋಧ್ಯಾ ಪೀಠ ವಿರಾಜಮಾನ ಶ್ರೀ ರಾಮ: ಬಾಲ ರಾಮರ ಪ್ರಾಣ ಪ್ರತಿಷ್ಠೆ ಪೂರ್ಣ

ಅಯೋಧ್ಯಾ ಪೀಠ ವಿರಾಜಮಾನ ಶ್ರೀ ರಾಮ: ಬಾಲ ರಾಮರ ಪ್ರಾಣ ಪ್ರತಿಷ್ಠೆ ಪೂರ್ಣ

ಅಯೋಧ್ಯೆ: ಶತ ಶತಮಾನಗಳ ಹೋರಾಟ, ಪ್ರಯತ್ನ, ವಿಶ್ವದ ಕೋಟ್ಯಂತರ ರಾಮ ಭಕ್ತರ ಅವಿರತ ಹಾರೈಕೆ, ಲಕ್ಷಕ್ಕೂ ಅಧಿಕ ಕರಸೇವಕರ ಪರಿಶ್ರಮದ ಫಲದಿಂದ ಇಂದು ಭರತ ಖಂಡದ ಪುಣ್ಯ ನಗರಿ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮ ಮೂರ್ತಿಗೆ ಅಭಿಜಿನ್ ಸುಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ಪೂರ್ಣಗೊಂಡಿದೆ. 2.7 ಏಕರೆ ವಿಸ್ತೀರ್ಣದ ಭವ್ಯ ರಾಮ ಮಂದಿರದಲ್ಲಿ 51 ಇಂಚು ಎತ್ತರದ ಶ್ರೀಬಾಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠೆ ಮಾಡಲಾಗಿದೆ.

ಸುಮಾರು ಏಳು ಸಾವಿರ ಮಂದಿ ವಿಶೇಷ ಆಹ್ವಾನಿತರ ಸಮ್ಮುಖದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಾಲರಾಮನ ಪ್ರಾಣಪ್ರತಿಷ್ಠೆಯಲ್ಲಿ ಯಜಮಾನನಾಗಿ ಭಾಗವಹಿಸಿದ್ದಾರೆ. ವಜ್ರ ವೈಡೂರ್ಯ ಚಿನ್ನಾಭರಣಗಳೊಂದಿಗೆ ಅಲಂಕೃತ ಬಾಲರಾಮ ವಿಶ್ವದಾದ್ಯಂತದ ಕೋಟ್ಯಂತರ ಭಕ್ತರಿಗೆ ದರ್ಶನ ನೀಡಿದ್ದಾರೆ. 5 ವರ್ಷ ವಯಸ್ಸಿನ ಬಾಲರಾಮರ ವಿಗ್ರಹ ಇದಾಗಿದ್ದು ಪೂರ್ಣಚಂದಿರನ ಪ್ರಭೆಯ ಮುಖ, ಕಮಲದ ದಳಗಳಂತ ಕಣ್ಣುಗಳು, ಮಂಡಿ ಮೀರಿ ಚಾಚಿದ ಕೈಗಳ ಅಜಾನುಬಾಹು, ಮಂದವಿಸ್ಮಿತನಾಗಿ ಕಂಗೊಳಿಸುತ್ತಿದ್ದಾರೆ.

ಇಂದು ಅಯೋಧ್ಯೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳಾಪಟ್ಟಿ:
ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ರವರೆಗೆ ದೇವಕಿನಂದನ್ ಠಾಕೂರ್ ಅವರಿಂದ ಶ್ರೀರಾಮ ಕಥಾ ವಾಚನ.
ಅಯೋಧ್ಯೆಯ 100 ಸ್ಥಳಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಸಾಂಸ್ಕೃತಿಕ ಮೆರವಣಿಗೆ.
ರಾಜ್ಯದ ವಿವಿಧ ಪ್ರದೇಶಗಳ 1,500 ಜನಪದ ನೃತ್ಯ ಕಲಾವಿದರು ಮತ್ತು ಸಂಸ್ಕೃತಿ ಸಚಿವಾಲಯದ ಪ್ರಾದೇಶಿಕ ಸಾಂಸ್ಕೃತಿಕ ಕೇಂದ್ರಗಳ 200 ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು.
ರಾಮಕಥಾ ಪಾರ್ಕ್‌ನಲ್ಲಿ ಸಂಜೆ 6 ರಿಂದ 7 ರವರೆಗೆ ರಾಮಲೀಲಾ ಪ್ರಸ್ತುತಿ.
6.30 ರಿಂದ ರಾಮ್ ಕಿ ಪೈಡಿಯಲ್ಲಿ ಸರಯು ಆರತಿ.
ಸಂಜೆ 7 ರಿಂದ 7 ರವರೆಗೆ- ರಾಮ್ ಕಿ ಪೈಡಿ ಉದ್ದಕ್ಕೂ ಪ್ರೊಜೆಕ್ಷನ್ ಶೋ ಸಂಜೆ 7 ರಿಂದ 7.30 ರವರೆಗೆ
ರಾಮಕಥಾ ಪಾರ್ಕ್‌ನಲ್ಲಿ ಸಂಜೆ 7 ರಿಂದ 8 ರವರೆಗೆ ವಾಟೇಕರ್ ಸಿಸ್ಟರ್ಸ್ ಅವರಿಂದ ಸ್ತೋತ್ರ ವಾಚನ
ಶರ್ಮಾ ಬಂಧು ಅವರಿಂದ ಭಜನಾ ಸಂಧ್ಯಾ ಸಂಜೆ 7 ರಿಂದ 8 ರವರೆಗೆ ತುಳಸಿ ಉದ್ಯಾನದಲ್ಲಿ
ರಾಮ್ ಕಿ ಪೈಡಿಯಲ್ಲಿ ಸಂಜೆ 7.30 ರಿಂದ 7.45 ರವರೆಗೆ ಲೇಸರ್ ಪ್ರದರ್ಶನ
ರಾಮ್ ಕಿ ಪೈಡಿಯಲ್ಲಿ ಪರಿಸರ ಸ್ನೇಹಿ ಪಟಾಕಿ ಪ್ರದರ್ಶನ 7.45 ರಿಂದ 7.55 ರವರೆಗೆ
ಸಾಂಸ್ಕೃತಿಕ ಸಂಜೆ 8 ರಿಂದ 9 ರವರೆಗೆ ರಾಮ್ ಕಥಾ ಪಾರ್ಕ್‌ನಲ್ಲಿ ಕನ್ಹಯ್ಯಾ ಮಿತ್ತಲ್ ಅವರಿಂದ. ಬಳಿಕ ರಾತ್ರಿ 8 ರಿಂದ 9 ರವರೆಗೆ ತುಳಸಿ ಉದ್ಯಾನದಲ್ಲಿ ರಘುವೀರ ಪದ್ಮಶ್ರೀ ಮಾಲಿನಿ ಅವಸ್ತಿ ಅವರಿಂದ ಕಾರ್ಯಕ್ರಮ.

ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/CMUDdTXoFVn7atm3zHYGrd

RELATED ARTICLES

ಪ್ರಮುಖ ಸುದ್ದಿಗಳು

Recent Comments