
ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮ ಮೂರ್ತಿಗೆ ಅಭಿಜಿನ್ ಸುಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ಪೂರ್ಣಗೊಂಡ ಬಳಿಕ ಪೂಜಾ ಕಾರ್ಯದ ಯಜಮಾನಿಕೆ ವಹಿಸಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 11 ದಿನಗಳ ಉಪವಾಸವನ್ನು ಅಂತ್ಯಗೊಳಿಸಿದರು. 11 ದಿನಗಳ ಕಾಲ ಉಪವಾಸ ಇದ್ದ ಮೋದಿಯವರು ದೇಶದ ಹಲವು ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತಾ ರಾಮ ಲಲ್ಲನ ಪ್ರಾಣ ಪ್ರತಿಷ್ಠೆಯ ವ್ರತದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಶ್ರೀರಾಮ ಜನ್ಮಭೂಮಿ ದೇಗುಲದಲ್ಲಿ ನಡೆದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಉಪವಾಸವನ್ನು ಮುರಿದರು. ಗೋವಿಂದ್ ದೇವ್ ಗಿರಿ ಜಿ ಮಹಾರಾಜ್ ಅವರ ಕೈಯಿಂದ ಪ್ರಸಾದ ಸ್ವೀಕರಿಸಿದ ಪ್ರಧಾನಿ ಮೋದಿ ತಮ್ಮ 11 ದಿನಗಳ ಉಪವಾಸವನ್ನು ಮುಕ್ತಾಯಗೊಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರದ ಪ್ರತಿಷ್ಠಾಪನೆಗೆ ಮುನ್ನ 11 ದಿನಗಳ ವಿಶೇಷ ಉಪವಾಸ ಮತ್ತು ಆಚರಣೆಗಳನ್ನು ಕೈಗೊಂಡಿದ್ದರು.
2.7 ಏಕರೆ ವಿಸ್ತೀರ್ಣದ ಭವ್ಯ ರಾಮ ಮಂದಿರದಲ್ಲಿ 51 ಇಂಚು ಎತ್ತರದ ಶ್ರೀಬಾಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠೆ ಮಾಡಲಾಗಿದೆ. ಈ ಪುಣ್ಯ ಕಾರ್ಯಕ್ರಮದ ಎಕ್ಸ್-ಕ್ಲ್ಯೂಸಿವ್ ಫೋಟೋಗಳು ನಮ್ಮ ಓದುಗರಿಗಾಗಿ.














ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/CMUDdTXoFVn7atm3zHYGrd












































