HomeArticlesಭಾರತದಲ್ಲಿ ಮೊದಲು ಖಾಸಗೀಕರಣ ಶುರು ಮಾಡಿದ್ದು ರಾಜೀವ್ ಗಾಂಧಿ!

ಭಾರತದಲ್ಲಿ ಮೊದಲು ಖಾಸಗೀಕರಣ ಶುರು ಮಾಡಿದ್ದು ರಾಜೀವ್ ಗಾಂಧಿ!

“ಮುಂದುವರೆದ ದೇಶಗಳೊಂದಿಗೆ ನಾವು ಸ್ಪರ್ಧಿಸಬೇಕಾದರೆ ಹತ್ತಿಪ್ಪತ್ತು ವರ್ಷ ಹಳೆಯದಾದ ಕಾನೂನುಗಳಿಂದ ಆಗದು, ಇವಕ್ಕೆ ಬದಲಾವಣೆ ಬೇಕಿದೆ” ಎನ್ನುತ್ತಲೇ ಎಲ್ಲಾ ರೀತಿಯ ಆರ್ಥಿಕ ಮತ್ತು ಕೈಗಾರಿಕಾ ನೀತಿಯನ್ನು ಬದಲಾಯಿಸಿದವರು ಅವರೇ, ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ..!!

1987ರಲ್ಲಿ ರಾಜೀವ್ ಗಾಂಧೀ ಸಾಹೇಬರು ಭಾರತೀಯ ಷೇರ್ ಮಾರ್ಕೆಟ್ ಸಂಬಂಧಿ ಕಾಯ್ದೆ ಸುಧಾರಣೆ ಮಾಡಿದರು. ಟೆಲಿಕಾಂ ಕ್ಷೇತ್ರವನ್ನು ಖಾಸಗೀಕರಣಗೊಳಿಸಿದರು‌. ಅದರ ಪ್ರತಿಫಲವಾಗಿ ಸಾರ್ವಜನಿಕವಾಗಿ STD ಬೂತ್’ಗಳು ಬಳಕೆಗೆ ಬಂದದ್ದು.! ಸರ್ಕಾರಿ ಒಡೆತನದ ಕೈಗಾರಿಕೆಗಳು ದಿವಾಳಿಯ ಅಂಚಿನಲ್ಲಿವೆ, ಒಂದೋ ನಾವು ಅದನ್ನು ಮುಚ್ಚಬೇಕು ಇಲ್ಲವೇ ಮಾರಬೇಕು ಎಂದು ಹೇಳಿದರು, “ಸ್ಕೂಟರ್ ಇಂಡಿಯಾ” ಸಂಸ್ಥೆ ಖಾಸಗೀಕರಣ ಮಾಡಲೋದಾಗ ತೀವ್ರತರವಾದ ವಿರೋಧ ವ್ಯಕ್ತವಾಯಿತು. 1988 ರಲ್ಲಿ ಪಂಜಾಬ್ ನಲ್ಲಿ ಪೇಪರ್ ಮಿಲ್ ಉದ್ಯಮಗಳನ್ನು ಖಾಸಗೀಕರಣ ಮಾಡಿದರು. ಮುಂದೆ ಸೆಟಲೈಟ್ಸ್ ರೈಟ್ಸ್ ಖಾಸಗಿಯವರಿಗೆ ನೀಡುವ ನಿರ್ಣಯ ಮಾಡಿದ್ದು.! ಹೀಗೆ ಪಟ್ಟಿ ಸಾಗುತ್ತದೆ.

ಇದಕ್ಕೆಲ್ಲ ಸಾಕ್ಷಿ ಏನಿದೆ ಅಂತೀರಾ. ಖಂಡಿತಾ ಇದೆ. ‘Backstage: The Story Behind India’s High Growth Years’ ಅನ್ನೋ ಪುಸ್ತಕದಲ್ಲಿ ಇದೆಲ್ಲದರ ವಿವರವಿದೆ. ಆದರೆ ಇವರು ತಂದ ಷೇರ್ ಮಾರ್ಕೆಟ್ ಕಾನೂನುಗಳು ಭ್ರಷ್ಟಾಚಾರಕ್ಕೆ ದಾರಿಯಾಗಿ 1992 ರಲ್ಲಿ ಹರ್ಷದ್ ಮೆಹ್ತಾ ಹಗರಣ ಹೊರಬಂತು. ಟೆಲಿಕಾಂ ಭ್ರಷ್ಟಾಚಾರವಾಗಿ ಅಂದಿನ ಟೆಲಿಕಾಂ ಮಿನಿಸ್ಟರ್ ಆಗಿದ್ದಂತಹ ಸುಕ್ರಾಂ ಬಂಧನವಾಯ್ತು..!!
ರಾಜೀವ್ ಗಾಂಧಿಯವರ ಖಾಸಗೀಕರಣ ನೀತಿ ಬಹಳವಾಗಿ ಹಿಡಿಸಿದ್ದು ಅಮೇರಿಕಾಗೆ. ಭಾರತದಲ್ಲಿ ಉದ್ಯಮ ಸ್ಥಾಪಿಸಲು ಅನುಕೂಲ ಮಾಡಿಕೊಡಲಾಗುವುದೆಂಬ ಭರವಸೆಯನ್ನು ರಾಜೀವ್ ಗಾಂಧಿ ಅಲ್ಲಿಗೆ ಹೋಗಿದ್ದಾಗ ನೀಡಿದ್ದರು. ಅದರ ಬಗೆಗೆ ರಾಜೀವ್ ಗಾಂಧಿ ಮಾಡಿದ ಭಾಷಣಕ್ಕೆ ಅಮೇರಿಕಾದ ಸಂಸತ್ತಿನವರು ಎದ್ದು ನಿಂತು ಚಪ್ಪಾಳೆ ಹೊಡೆದಿದ್ದರು. ಅಂದಿನ ಅಮೇರಿಕಾದ ಅಧ್ಯಕ್ಷರಾಗಿದ್ದ ನಿಕ್ಸನ್ ಖುದ್ದಾಗಿ ಛತ್ರಿ ಹಿಡಿದು ಕಾರಿನವರೆಗೆ ಬಂದು ಬಿಟ್ಟಿದ್ದರು.!

ರಾಜೀವ್ ಗಾಂಧಿ ಖಾಸಗಿ ಕಂಪನಿಗಳಿಗೆ ವಿಧಿಸುವ ತೆರಿಗೆ ನೀತಿ ಬದಲಾಯಿಸಿದರು, Domestic tax ಪದ್ದತಿ ಬದಲಾಯಿಸಿದರು,‌ ಅವೇ ಇಂದಿನ GST ಗೆ ಮಾರ್ಗಸೂಚಿಯಾದದ್ದು. ಅಂದು ಬದಲಾಯಿಸಿದ ಕಾನೂನುಗಳೇ ಮುಂದೆ 2G, 3G coal ಹಗರಣಗಳಿಗೆ ದಾರಿಯಾದದ್ದು. ಸುಕ್ರಾಂನಂತೆ ಟೆಲಿಕಾಂ ಹಗರಣದಲ್ಲಿ A.ರಾಜ, ಕನಿಮೋಳಿ, ಸೆಟಲೈಟ್ ರೈಟ್ಸ್ ಮಾರಿದ ಹಗರಣದಲ್ಲಿ ಪಿ.ಚಿದಂಬರಂ ಬಂಧಿಯಾದುದು, ಸ್ವತಃ ರಾಜೀವ್ ಗಾಂಧಿಯವರಿಗೆ “ಭೋಫೋರ್ಸ್ ಹಗರಣ” ಸುತ್ತಿಕೊಂಡು ಚುನಾವಣೆಯಲ್ಲಿ ಸೋಲುವಂತಾಯ್ತು.!

ಇವಾಗ ಮೋದಿ ಸರ್ಕಾರ ಅಂದು ರಾಜೀವ್ ಗಾಂಧಿ ಮಾಡಿದ ಕೆಲಸವನ್ನೇ ಮಾಡಲೊರಟಿದೆ. ಪರಿಣಾಮ ಏನಾಗುತ್ತದೆ ಎಂಬುದನ್ನು ತಜ್ಞರು ಹೇಳಬೇಕಿದೆ. ಯಾರಾದರೂ GSTಗೆ‌, ಟಿಲಿಕಾಂ ಜಿಯೋಗೆ, ಹಲವು ಆಸ್ತಿಗಳ ಖಾಸಗೀಕರಣಕ್ಕೆ ಮೋದಿ ಕಾರಣ ಅಂದ್ರೆ ಒಮ್ಮೆ “Indian economic reformer” ಅಂತ ಹೆಸರು ಪಡೆದಿದ್ದ ಭಾರತರತ್ನ ದಿವಂಗತ ರಾಜೀವ್ ಗಾಂಧಿ ಹೆಸರು ಹೇಳಿ ಸಾಕು.‌!

  • ಆಕಾಶ್ ಮಂಡ್ಯ
RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments