HomeAutomobileಭಾರತದಲ್ಲಿ ಹೊಸ ಯೋಜನೆಗಾಗಿ ರೂ. 38,200 ಕೋಟಿ ಹೂಡಿಕೆ ಘೋಷಿಸಿದ ಮಾರುತಿ ಸುಜುಕಿ

ಭಾರತದಲ್ಲಿ ಹೊಸ ಯೋಜನೆಗಾಗಿ ರೂ. 38,200 ಕೋಟಿ ಹೂಡಿಕೆ ಘೋಷಿಸಿದ ಮಾರುತಿ ಸುಜುಕಿ

ಅಹಮದಾಬಾದ್: ವೈಬ್ರೆಂಟ್ ಗುಜರಾತ್‌ 10 ನೇ ಜಾಗತಿಕ ಶೃಂಗಸಭೆಯಲ್ಲಿ ಸಭೆಯಲ್ಲಿ ಮಾತನಾಡಿದ ತೋಶಿಹಿರೊ ಸುಜುಕಿ, ಭಾರತದ ಆರ್ಥಿಕ ಬೆಳವಣಿಗೆ ಕುರಿತು ಅಚ್ಚರಿ ವ್ಯಕ್ತಪಡಿಸುತ್ತಾ ನಾವು ಭವಿಷ್ಯದಲ್ಲಿ ಮತ್ತಷ್ಟು ಹೊಸ ಹೂಡಿಕೆಗಳಿಗೆ ಉತ್ಸುಕರಾಗಿದ್ದೇವೆ ಎಂದಿದ್ದಾರೆ. ಹೊಸ ಹೂಡಿಕೆಯಲ್ಲಿ ಮೊದಲು ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕ ತೆರೆಯಲಾಗುತ್ತಿದ್ದು, ಈ ವರ್ಷಾಂತ್ಯಕ್ಕೆ ಹೊಸ ಇವಿ ಉತ್ಪಾದನಾ ಘಟಕದಿಂದಲೇ ಭಾರತದಲ್ಲಿ ಮಾತ್ರವಲ್ಲದೆ ಜಪಾನ್ ಮತ್ತು ಯುರೋಪಿಯನ್ ರಾಷ್ಟ್ರಗಳಿಗೂ ರಫ್ತು ಮಾಡಲು ನಾವು ಯೋಜಿಸಿದ್ದೇವೆ ಎಂದಿದ್ದಾರೆ.

ಗುಜರಾತ್ ಆರಂಭವಾಗುತ್ತಿರುವ ಮಾರುತಿ ಸುಜುಕಿ ಹೊಸ ಇವಿ ಉತ್ಪಾದನಾ ಘಟಕವು ವಾರ್ಷಿಕವಾಗಿ 2.5 ಲಕ್ಷ ವಾಹನ ಉತ್ಪಾದನಾ ಸಾಮರ್ಥ್ಯ ಹೊಂದಿಲಿದ್ದು, ಇದಕ್ಕಾಗಿ ರೂ. 3,200 ಕೋಟಿ ಆರಂಭಿಕ ಹೂಡಿಕೆ ಮಾಡಲಾಗುತ್ತಿದೆ. ಇದರೊಂದಿಗೆ ಸಾಮಾನ್ಯ ಕಾರುಗಳ ಉತ್ಪಾದನೆಗಾಗಿ ಹೊಸ ಘಟಕ ಸ್ಥಾಪನೆ ಮತ್ತು ಕಾರ್ಯಾಚರಣೆಯಲ್ಲಿರುವ ಘಟಕಗಳ ಉತ್ಪದನಾ ಸಾಮರ್ಥ್ಯ ಹೆಚ್ಚಳಕ್ಕಾಗಿ ರೂ. 35,000 ಕೋಟಿ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ.

ಹೊಸ ಬಂಡವಾಳ ಹೂಡಿಕೆಯೊಂದಿಗೆ ಮಾರುತಿ ಸುಜುಕಿಯು ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು 7.5 ಲಕ್ಷ ಯುನಿಟ್ ನಿಂದ 10 ಲಕ್ಷ ಯುನಿಟ್‌ಗಳಷ್ಟು ಹೆಚ್ಚಿಸಲು ನಿರ್ಧರಿಸಲಾಗಿದ್ದು, ಈ ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ ವಾಹನ ಉತ್ಪಾದನೆಯಲ್ಲಿ 1.7 ಪಟ್ಟು ಹೆಚ್ಚಳ ಮತ್ತು ರಫ್ತು ಪ್ರಮಾಣದಲ್ಲಿ 2.6 ಪಟ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.

RELATED ARTICLES

ಪ್ರಮುಖ ಸುದ್ದಿಗಳು

Recent Comments