HomeCoastalಬಂಟ್ವಾಳ: ಭಾರೀ ಮಳೆಗೆ ಮನೆ ಮೇಲೆ ಗುಡ್ಡ ಕುಸಿತ; ಇಬ್ಬರ ರಕ್ಷಣೆ, ಇನ್ನಿಬ್ಬರು ಮಣ್ಣಿನೊಳಗೆ

ಬಂಟ್ವಾಳ: ಭಾರೀ ಮಳೆಗೆ ಮನೆ ಮೇಲೆ ಗುಡ್ಡ ಕುಸಿತ; ಇಬ್ಬರ ರಕ್ಷಣೆ, ಇನ್ನಿಬ್ಬರು ಮಣ್ಣಿನೊಳಗೆ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ತನ್ನ ಬಿರುಸನ್ನು ಹೆಚ್ಚಿಸಿದ್ದು ಬಂಟ್ವಾಳ ತಾಲೂಕಿನ ಪಂಜಿಕಲ್ಲು ಎಂಬಲ್ಲಿ ಗುಡ್ಡ ಮನೆಯ ಮೇಲೆ ಕುಸಿದು ಮನೆಯೊಳಗೆ ಮೂವರು ಕಾರ್ಮಿಕರು ಸಿಲುಕಿದ ಘಟನೆ ಇಂದು ರಾತ್ರಿ (ಬುಧವಾರ) ನಡೆದಿದೆ. ಇಬ್ಬರನ್ನು ರಕ್ಷಣೆ ಮಾಡಲಾಗಿದ್ದು ಇನ್ನಿಬ್ಬರು ಮಣ್ಣಿನಡಿ ಅಥವಾ ಮನೆ ಕುಸಿದ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ.

ಪಂಜಿಕಲ್ಲು ನಿವಾಸಿ ಹೆನ್ರಿ ಕಾರ್ಲೊ ಅವರ ಮನೆಯ ಹೊರಗಿನ ಕೊಠಡಿಯ ಮೇಲೆ ಮಣ್ಣು ಕುಸಿದಿದೆ. ಅದರಲ್ಲಿ ಹೆನ್ರಿ ಅವರ ತೋಟದ ಕೆಲಸ ಮಾಡುವ ಉತ್ತರ ಕನ್ನಡ ಮೂಲದ ಕಾರ್ಮಿಕರು ತಂಗಿದ್ದರು. ಸಮೀಪದ ಗುಡ್ಡ ಕುಸಿದ ಕರಣ ಅವರ ಕೊಠಡಿ ನೆಲಸಮವಾಗಿದೆ. ಅವಶೇಷಗಳಡಿಯಿಂದ ಇಬ್ಬರನ್ನು ಕೂಡಲೇ ರಕ್ಷಿಸಲಾಗಿದ್ದು ತೀವ್ರಗೊಂಡಿದೆ.

ಸ್ಥಳದಲ್ಲಿ ಜೆಸಿಬಿ ಕಾರ್ಯಾಚರಣೆ ನಡೆಯುತ್ತಿದ್ದು ಬಂಟ್ವಾಳ ಪೊಲೀಸರು ಭೇಟಿ ನೀಡಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments