HomeCoastalಮಂಗಳೂರಿಗೆ ಬರುತ್ತಿದ್ದ ಇಸ್ರೇಲ್ ಹಡಗಿನ ಮೇಲೆ ಡ್ರೋನ್ ದಾಳಿ, ಬೆಂಕಿ ಅವಘಡ: ನೆರವಿಗೆ ಧಾವಿಸಿದ ಭಾರತೀಯ...

ಮಂಗಳೂರಿಗೆ ಬರುತ್ತಿದ್ದ ಇಸ್ರೇಲ್ ಹಡಗಿನ ಮೇಲೆ ಡ್ರೋನ್ ದಾಳಿ, ಬೆಂಕಿ ಅವಘಡ: ನೆರವಿಗೆ ಧಾವಿಸಿದ ಭಾರತೀಯ ನೌಕಾಪಡೆ

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಲಿಬೇರಿಯಾ ಧ್ವಜವುಳ್ಳ ಇಸ್ರೇಲ್‌ಗೆ ಸಂಬಂಧಿಸಿದ ವ್ಯಾಪಾರಿ ಹಡಗೊಂದಕ್ಕೆ ಅಪರಿಚಿತ ಡ್ರೋನ್ ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿ ಹಡಗಿಗೆ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಭಾರತೀಯ ನೌಕಾಪಡೆಯ ನೌಕೆ ಹಡಗಿನ ರಕ್ಷಣೆಗೆ ಧಾವಿಸಿದೆ.

ಶನಿವಾರ (ಡಿಸೆಂಬರ್ 23) ಈ ದುರ್ಘಟನೆ ಜರಗಿದ್ದು ಯಾವುದೇ ಜೀವ ಹಾನಿ ವರದಿಯಾಗಿಲ್ಲ, ಹಡಗಿನಲ್ಲಿರುವ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಬೆಂಕಿಯನ್ನು ನಂದಿಸಲಾಗಿದ್ದರೂ ಹಡಗಿನ ಕಾರ್ಯಾಚರಣೆಗೆ ತೊಂದರೆಯಾಗಿದೆ.

ಧಾಳಿಗೊಳಗಾದ ಹಡಗು ಸೌದಿಯಿಂದ ಮಂಗಳೂರಿಗೆ ಬರುತ್ತಿತ್ತು. ಭಾರತದ ಕರಾವಳಿ ಗುಜರಾತ್‌ನ ವೆರಾವಲ್ ಕರಾವಳಿಯಿಂದ ಸುಮಾರು 200 ಕಿ.ಮೀ ದೂರ ಅರಬ್ಬಿ ಸಮುದ್ರದಲ್ಲಿ ಈ ದಾಳಿ ನಡೆದಿದೆ. ಡ್ರೋನ್ ಅಪ್ಪಳಿಸಿದ ಕೂಡಲೇ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಡ್ರೋನ್ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಯಾವುದೇ ಸಂಘಟನೆ ಈ ದುಷ್ಕೃತ್ಯದ ಬಗ್ಗೆ ಹೊಣೆ ಹೊತ್ತುಕೊಂಡಿಲ್ಲ.

ಇರಾನ್ ಡ್ರೋನ್ ಶಂಕೆ:
“ಲೈಬೀರಿಯಾ ಧ್ವಜದ ರಾಸಾಯನಿಕ ಟ್ಯಾಂಕರ್ ಮೋಟಾರು ನೌಕೆ ‘ಕೆಮ್ ಫ್ಲ್ಯೂಟೋ’ಗೆ ಹಿಂದೂ ಮಹಾಸಾಗರದಲ್ಲಿ, ಭಾರತದ ಕರಾವಳಿಯಿಂದ 200 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಡ್ರೋನ್ ಅಪ್ಪಳಿಸಿದೆ. ಈ ಡ್ರೋನ್ ಅನ್ನು ಇರಾನ್‌ನ ಕಡೆಯಿಂದ ಹಾರಿಸಲಾಗಿದೆ” ಎಂದು ಪೆಂಟಗನ್ ವಕ್ತಾರರು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಸೌದಿ ಅರೇಬಿಯಾದ ಬಂದರಿನಿಂದ ಮಂಗಳೂರಿನ ಕಡೆಗೆ ಬರುತ್ತಿದ್ದ ಹಡಗು, ಕಚ್ಚಾ ತೈಲವನ್ನು ಸಾಗಿಸುತ್ತಿತ್ತು. ಭಾರತದ ವಿಶೇಷ ಆರ್ಥಿಕ ವಲಯದಲ್ಲಿ ಪಹರೆ ನಡೆಸುತ್ತಿದ್ದ ಕರಾವಳಿ ಕಾವಲು ಹಡಗು ಐಸಿಜಿಎಸ್ ವಿಕ್ರಮ್, ಆಪತ್ತಿನಲ್ಲಿರುವ ವ್ಯಾಪಾರಿ ಹಡಗಿನ ಕಡೆಗೆ ದೌಡಾಯಿಸಿದೆ. ಅದಕ್ಕೆ ಸಹಾಯ ಒದಗಿಸುವಂತೆ ಈ ಭಾಗದಲ್ಲಿನ ಎಲ್ಲಾ ಹಡುಗಳಿಗೂ ಕರಾವಳಿ ಕಾವಲು ಪಡೆ ವಿಭಾಗ ಸೂಚನೆ ನೀಡಿದೆ. ಹಡಗಿನಲ್ಲಿರುವ ಸಿಬ್ಬಂದಿಯಲ್ಲಿ 20 ಭಾರತೀಯರು ಕೂಡ ಸೇರಿದ್ದಾರೆ. 20 ಭಾರತೀಯರನ್ನು ಒಳಗೊಂಡಂತೆ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.

ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
 https://chat.whatsapp.com/CMUDdTXoFVn7atm3zHYGrd

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments