HomeCoastal2021-22 ನೇ ಸಾಲಿನಲ್ಲಿ 14 ಕೋಟಿ ಲಾಭ ದಾಖಲಿಸಿದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ :...

2021-22 ನೇ ಸಾಲಿನಲ್ಲಿ 14 ಕೋಟಿ ಲಾಭ ದಾಖಲಿಸಿದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ : ಯಶಪಾಲ್ ಸುವರ್ಣ

ಉಡುಪಿ: ಕರಾವಳಿ ಭಾಗದ ಪ್ರತಿಷ್ಟಿತ ಪಟ್ಟಣ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ 2021-22ನೇ ಸಾಲಿನಲ್ಲಿ 641.22 ಕೋಟಿ ರೂ. ವ್ಯವಹಾರ ನಡೆಸಿ 14 ಕೋಟಿ ರೂ ಲಾಭ ದಾಖಲಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಯಶ್‍ಪಾಲ್ ಸುವರ್ಣ ತಿಳಿಸಿದ್ದಾರೆ.

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಸಹಕಾರಿ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆಗೆ ಒಳಪಟ್ಟು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿದೆ. ಬ್ಯಾಂಕ್ 2021-22ನೇ ಸಾಲಿನಲ್ಲಿ 368 ಕೋಟಿ ಠೇವಣಿ, 273 ಕೋಟಿ ಸಾಲ ಮತ್ತು ಮುಂಗಡದೊಂದಿಗೆ, ರೂ. 19.34 ಕೋಟಿ ಪಾಲು ಬಂಡವಾಳದೊಂದಿಗೆ, ಹಣಕಾಸು ವರ್ಷದಲ್ಲಿ ಠೇವಣಿ ಸಂಗ್ರಹಣೆಯಲ್ಲಿ 51%, ಸಾಲ ಮತ್ತು ಮುಂಗಡ 54%, ಪಾಲು ಬಂಡವಾಳ 73% ಪ್ರಗತಿ ಸಾಧಿಸಿದೆ ಎಂದು ಯಶಪಾಲ್ ಸುವರ್ಣ ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ವ್ಯವಹಾರ ಕ್ಷೇತ್ರವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ತಾಲೂಕುಗಳಾದ ಕುಮುಟಾ, ಹೊನ್ನಾವರ, ಭಟ್ಕಳ ಹಾಗೂ ಕಾರವಾರ ತಾಲೂಕುಗಳಿಗೆ ವಿಸ್ತರಿಸಲಾಗಿದೆ. ಬ್ಯಾಂಕಿನ ಮಲ್ಪೆ, ಕುಂದಾಪುರ, ಮಂಗಳೂರು, ಸುರತ್ಕಲ್ ಶಾಖೆ ಹಾಗೂ ಆಡಳಿತ ಕಚೇರಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಶಾಖೆಗಳಲ್ಲಿ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಗ್ರಾಹಕರಿಗೆ ಆರ್.ಟಿ.ಜಿ.ಎಸ್., ನೆಫ್ಟ್ ಸೌಲಭ್ಯವನ್ನು ನೀಡುತ್ತಿದೆ. ಸೇಫ್ ಡೆಪಾಸಿಟ್ ಲಾಕರ್, ಇ-ಸ್ಟ್ಯಾಂಪಿಂಗ್, ಎಸ್‍ಎಮ್‍ಎಸ್ ಬ್ಯಾಂಕಿಂಗ್, ಎಬಿಕ್ಸ್ ಕ್ಯಾಶ್ (ವೆಸ್ಟರ್ನ್ ಯೂನಿಯನ್), ಎಚ್‍ಡಿಎಫ್‍ಸಿ ಬ್ಯಾಂಕಿನ ಒಡಂಬಡಿಕೆಯೊಂದಿಗೆ ಎಟಿಎಂ ಸೌಲಭ್ಯ, ಕ್ಯೂಆರ್ ಕೋಡ್ ಸೌಲಭ್ಯ, ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಅಳವಡಿಕೊಳ್ಳಲಾಗಿದೆ.

ಮಹಾಲಕ್ಷ್ಮೀ ಬ್ಯಾಂಕ್, ವಿದ್ಯಾರ್ಥಿಗಳಿಗಾಗಿ ಮಹಾಲಕ್ಷ್ಮೀ ವಿದ್ಯಾಸಿರಿ ಝೀರೋ ಬ್ಯಾಲೆನ್ಸ್ ಉಳಿತಾಯ ಖಾತೆ ಯೋಜನೆ ಆರಂಭಿಸಿದ್ದು, ಠೇವಣಿಗಳಿಗೆ ಶೇ. 0.40% ಅಧಿಕ ಬಡ್ಡಿ, ಸಂಘ ಸಂಸ್ಥೆಗಳ ರೂ. 25 ಲಕ್ಷ ಮೇಲ್ಪಟ್ಟ ಠೇವಣಿಗಳಿಗೆ (ಒಂದು ವರ್ಷ ಮೇಲ್ಪಟ್ಟ ಅವಧಿ) ಶೇ. 8.5% ಬಡ್ಡಿ ನೀಡಲಾಗುತ್ತಿದ್ದು, ಆಜಾದಿ ಕಾ ಅಮೃತ್ ಮಹೋತ್ಸವದ ವರ್ಷಾಚರಣೆಯ ಅಂಗವಾಗಿ ವೈಯಕ್ತಿಕ ಉಳಿತಾಯ ಖಾತೆಯಲ್ಲಿ ರೂ. 2 ಲಕ್ಷ ಮೇಲ್ಪಟ್ಟ ಠೇವಣಿಗಳಿಗೆ ಹೆಚ್ಚುವರಿ ಶೇ. 0.50 ಬಡ್ಡಿ ಹಾಗೂ ಸಹಕಾರಿ ಸಂಘ ಮತ್ತು ಸಂಘ ಸಂಸ್ಥೆಗಳ ಉಳಿತಾಯ ಖಾತೆಯಲ್ಲಿ ರೂ. 5 ಲಕ್ಷ ಮೇಲ್ಪಟ್ಟ ಠೇವಣಿಗೆ ಶೇ. 1.0 ಬಡ್ಡಿ ನೀಡಲಾಗುತ್ತಿದ್ದು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಯಶಪಾಲ್ ಸುವರ್ಣ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments