HomeCoastalಮಂಗಳೂರು ಬೆಂಗ್ರೆ: ರಾಕೆಟ್ ಪಟಾಕಿಯ ಕಿಡಿಗೆ ಹೊತ್ತಿ ಉರಿಯಿತು 3 ಬೋಟುಗಳು

ಮಂಗಳೂರು ಬೆಂಗ್ರೆ: ರಾಕೆಟ್ ಪಟಾಕಿಯ ಕಿಡಿಗೆ ಹೊತ್ತಿ ಉರಿಯಿತು 3 ಬೋಟುಗಳು

ಮಂಗಳೂರು: ದೀಪಾವಳಿ ಸಂದರ್ಭ ಹಚ್ಚಿದ ರಾಕೆಟ್ ಪಟಾಕಿಯ ಕಿಡಿಗೆ ನದಿ ತೀರದಲ್ಲಿ ಲಂಗರು ಹಾಕಿದ್ದ 3 ಬೋಟುಗಳು ಬೆಂಕಿಗಾಹುತಿಯಾದ ಘಟನೆ ಮಂಗಳೂರಿನ ಬೆಂಗ್ರೆಯಲ್ಲಿ ನಡೆದಿದೆ. ಮೂರು ಬೋಟುಗಳು ಭಾಗಶಃ ಹೊತ್ತಿ ಉರಿದಿದ್ದು ಕೋಟ್ಯಂತರ ರೂಪಾಯಿಗಳ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.

ಎಂಎಸ್ವಿ ನಜತ್, ಎಂಎಸ್ವಿ ಅಲಿ ಮದತ್, ಎಂಎಸ್ವಿ ಅಲ್ ಜಜೀರಾ ಬೆಂಕಿಗಾಹುತಿಯಾದ ಬೋಟುಗಳು. ಮೂರು ಬೋಟುಗಳನ್ನು ಬೆಂಗ್ರೆ ನದಿ ತೀರದಲ್ಲಿ ಲಂಗರು ಹಾಕಲಾಗಿತ್ತು. ಈ ಮೂರು ಬೋಟುಗಳು ಲಕ್ಷದ್ವೀಪಕ್ಕೆ ಸರಕು ಸಾಗಿಸುವ ಬೋಟುಗಳಾಗಿದ್ದವು.

ಅಗ್ನಿಶಾಮಕ ದಳ ಗಮಿಸಿ ಬೆಂಕಿ ನಂದಿಸಿದ್ದು ಯಾರಿಗೂ ಪ್ರಾಣ ಹಾನಿ ಆಗಿಲ್ಲ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೆಲನೆ ನಡೆಸುತ್ತಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments