Coastal

ಮಂಗಳೂರಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್: ಸಂಚುಕೋರರ ರಕ್ತ ಹರಿಸುವ ಎಚ್ಚರಿಕೆ ನೀಡಿದ ಭಜರಂಗದಳ

ಮಂಗಳೂರು: ಹೆಚ್ಚುತ್ತಿರುವ ಲವ್ ಜಿಹಾದ್ ವಿರುದ್ದ ಭಜರಂಗದಳ ರಕ್ತ ಹರಿಸುವ ಎಚ್ಚರಿಕೆ ನೀಡಿದ್ದು ಈ ಬಗ್ಗೆ ಭಜರಂಗದಳ ಸಂಚಾಲಕರು ಬರೆದ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿಸಿದೆ. ಹಿಂದೂ ಸಮಾಜ ಎಷ್ಟೇ ಎಚ್ಚರಿಕೆ ಕೊಟ್ಟರೂ ಯಾವುದೇ ಎಗ್ಗಿಲ್ಲದೆ ಹಿಂದೂ ಯುವತಿಯರ ಜೀವನ ನರಕವಾಗಿಸುವ ಲವ್ ಜಿಹಾದ್ ಮುಂದುವರೆಯುತ್ತಿದ್ದು ಈ ಬಾರಿ ರಕ್ತ ಹರಿಸುವ ಸೂಚನೆಯನ್ನು ಹಿಂದೂ ಸಂಘಟನೆ ಭಜರಂಗದಳ ನೀಡಿದೆ.

ಭಜರಂಗದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಈ ಪೋಸ್ಟರನ್ನು ತನ್ನ ಫೇಸ್ ಬುಕ್ ಮತ್ತು ಸಾಮಾಜಿಕ ತಾಣಗಳಲ್ಲಿ ಹಾಕಿ ಲವ್ ಜಿಹಾದ್ ಸಂಚು ಹೊಂದಿರುವವರಿಗೆ ಮರಣದ ಎಚ್ಚರಿಕೆ ನೀಡಿದ್ದಾರೆ.

‘ಪದೇ ಪದೇ ಹೇಳುತ್ತಿದ್ದೇವೆ, ಹಿಂದೂ ಹುಡುಗಿಯರ ಜೊತೆ ತಿರುಗಬೇಡಿ’ ‘ಲವ್ ಜಿಹಾದ್ ಮಾಡಿ ಹಿಂದೂ ಹುಡುಗಿಯರ ಬಾಳು ಹಾಳು ಮಾಡಬೇಡಿ’ ‘ನಂತೂರು ಘಟನೆ ಕೇವಲ ಸ್ಯಾಂಪಲ್ ಅಷ್ಟೇ’ ‘ಲವ್ ಜಿಹಾದ್ ನಿಲ್ಲಿಸದೇ ಇದ್ದರೆ ನಿಮಗೆ ಮಯ್ಯತ್(ಮರಣ) ಶತಸಿದ್ದ’ ಎಂದು ಪೋಸ್ಟ್ ನಲ್ಲಿ ಬರೆಯಲಾಗಿದೆ.

ಕಳೆದ ವಾರ ಮೂಡಬಿದ್ರೆಯಿಂದ ಮಂಗಳೂರು ನಗರಕ್ಕೆ ಬರುತ್ತಿದ್ದ ಖಾಸಗಿ ಬಸ್‌ನಲ್ಲಿದ್ದ ಹಿಂದೂ ಯುವತಿ ಜೊತೆಗಿದ್ದ ಮುಸ್ಲಿಂ ಯುವಕನ ಮೇಲೆ ಬಜರಂಗದಳದ ಕಾರ್ಯಕರ್ತರು ಮಂಗಳೂರು ನಗರದ ನಂತೂರು ಬಳಿ ಸರಿಯಾಗಿ ಗೂಸಾ ನೀಡಿದ್ದರು.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version