HomeCoastalಕೇರಳದಲ್ಲಿ ಚಂದ್ರದರ್ಶನ: ದಕ್ಷಿಣ ಕನ್ನಡ ಉಡುಪಿಯಲ್ಲಿ ನಾಳೆಯಿಂದ ರಂಜಾನ್ ಉಪವಾಸ ಆರಂಭ

ಕೇರಳದಲ್ಲಿ ಚಂದ್ರದರ್ಶನ: ದಕ್ಷಿಣ ಕನ್ನಡ ಉಡುಪಿಯಲ್ಲಿ ನಾಳೆಯಿಂದ ರಂಜಾನ್ ಉಪವಾಸ ಆರಂಭ

ಮಂಗಳೂರು: ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಪವಿತ್ರ ರಂಜಾನ್ ಉಪವಾಸವು ನಾಳೆಯಿಂದ (ಗುರುವಾರ) ಆರಂಭವಾಗಲಿದೆ. ಕೇರಳದ ಕಲ್ಲಿಕೋಟೆಯ ಕಾಪಾಡ್ ಎಂಬಲ್ಲಿ ಇಂದು ಚಂದ್ರ ದರ್ಶನ ಆಗಿದ್ದು ದಕ್ಷಿಣ ಉಡುಪಿ ಜಿಲ್ಲೆಯ ಇಸ್ಲಾಂ ಮತೀಯರು ಗುರುವಾರದಿಂದ ಪವಿತ್ರ ರಂಜಾನ್ ಉಪವಾಸ ಆರಂಭಿಸುವಂತೆ ದ.ಕ ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಪರವಾಗಿ ಕೇಂದ್ರ ಜುಮ್ಮಾ ಮಸೀದಿಯ ಖತೀಬ್ ಅಲ್ ಹಾಜಿ ಅಬ್ದುಲ್ ಅಕ್ರಮ್ ಮಹಮ್ಮದ್ ಅವರು ತಿಳಿಸಿದ್ದಾರೆ.

ಉಡುಪಿ, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಾಳೆಯಿಂದ ರಂಜಾನ್ ಉಪವಾಸ ಆರಂಭವಾಗಲಿದೆ. ರಂಜಾನ್ ಮುಸ್ಲಿಮರ ಪವಿತ್ರ ಹಬ್ಬವಾಗಿದ್ದು ಎಲ್ಲೆಡೆ ಮುಸ್ಲಿಂ ಬಂಧುಗಳು ಶ್ರದ್ಧೆಯಿಂದ ಒಂದು ತಿಂಗಳ ಕಾಲ ಉಪವಾಸವನ್ನು ಆಚರಿಸುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments