
ಮಂಗಳೂರು : ಮಂಗಳೂರಿನ ಯೆಯ್ಯಾಡಿ ಕೈಗಾರಿಕಾ ಪ್ರದೇಶದಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿದ್ದು ಯೆಯ್ಯಾಡಿ ಕೈಗಾರಿಕಾ ಪ್ರದೇಶದ ಖಾಸಗಿ ಆಹಾರ ಸಂಸ್ಥೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬೆಂಕಿ ಅವಘಡದಿಂದ ಕೋಟ್ಯಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.
ಗುರುವಾರ ಸಂಜೆ ಈ ಬೆಂಕಿ ದುರಂತ ಸಂಭವಿಸಿದ್ದು ಯೆಯ್ಯಾಡಿಯ ಏಸ್ ಫುಡ್ ಪ್ರೈವೆಟ್ ಸಂಸ್ಥೆ ಬೆಂಕಿಗಾಹುತಿಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಅವಘಡ ಉಂಟಾಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಕದ್ರಿಯ ಅಗ್ನಿಶಾಮಕ ದಳದ ಸಿಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ದುರಂತದಿಂದಾಗಿ ಬೆಂಕಿಯ ಕೆನ್ನಾಲಿಗೆ ಹಾಗು ವಿಪರೀತ ಹೊಗೆ ದಟ್ಟವಾಗಿ ಹರಡಿದ್ದು ಸ್ಥಳದಲ್ಲಿ ಹಲವಾರು ಜನ ಸೇರಿದ್ದರು.
ಬೆಂಕಿ ಅವಘಡದಿಂದಾಗಿ ಏಸ್ ಫುಡ್ ಫ್ಯಾಕ್ಟರಿಗೆ ಕೊಟ್ಯಾಂತರ ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.












































