
ಮಂಗಳೂರು: ಡ್ರಗ್ಸ್ ಸ್ಮಗ್ಲಿಂಗ್ ಜಾಲವನ್ನು ಭೇದಿಸಿರುವ ಕೊಣಾಜೆ ಪೊಲೀಸರು ಎಂಡಿಎಂಎ ಮಾದಕ ದ್ರವ್ಯ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಭಾರೀ ಪ್ರಮಾಣದ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಕೇರಳ ರಾಜ್ಯದ ಉಪ್ಪಳ ನಿವಾಸಿಗಳಾದ ಅಮೀರ್ (39), ಮಹಮ್ಮದ್ ಪರ್ವೇಜ್ (40) ಮತ್ತು ಮಹಮ್ಮದ್ ಅನ್ಸಿಫ್ (38) ಬಂಧಿತ ಆರೋಪಿಗಳು. ಬಂಧಿತರಿಂದ 3.60 ಲಕ್ಷ ಮೌಲ್ಯದ 60 ಗ್ರಾಂ ಎಂಡಿಎಂಎ, ಒಂದು ಕಾರು, ಡಿಜಿಟಲ್ ತೂಕದ ಯಂತ್ರ, ಎರಡು ಸ್ಟ್ರೋಕ್ ಟ್ಯೂಬ್‌ಗಳು ಮತ್ತು ಒಟ್ಟು 8.60 ಲಕ್ಷ ಮೌಲ್ಯದ ಲೈಟರ್ ವಶಪಡಿಸಿಕೊಳ್ಳಲಾಗಿದೆ.
ಈ ಮೂವರನ್ನೂ ಮಂಗಳೂರಿನ ಕೊಣಾಜೆಯ ಯೂನಿವರ್ಸಿಟಿ ಕಾಲೇಜು ಬಂಧಿಸಲಾಗಿದೆ. ಆರೋಪಿಗಳು ಮಾದಕ ದ್ರವ್ಯಗಳನ್ನು ಬೆಂಗಳೂರಿನಿಂದ ತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರು ಮೂಲದ ವ್ಯಕ್ತಿಯನ್ನೂ ಪತ್ತೆ ಮಾಡುತ್ತೇವೆ ಎಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.
(ಗುಣಮಟ್ಟದ ಸುದ್ದಿಗಳನ್ನು ನೇರವಾಗಿ ನಿಮ್ಮ ಮೊಬೈಲ್ ಅಲ್ಲಿ ಪಡೆಯಲು ನಮ್ಮ ವಾಟ್ಸಾಪ್ ಗುಂಪಿಗೆ ಸೇರಿರಿ. ಲಿಂಕ್ : https://chat.whatsapp.com/GcMFEE9n0iP0mgfzL9qqyH )