
ಮಂಗಳೂರು: ಕಾರಣಿಕ ದೈವ ಕೊರಗಜ್ಜನ ಮೂಲಸ್ಥಳ ಕುತ್ತಾರುವಿನ ಏಳು ತಳಗಳಲ್ಲಿ ಒಂದಾದ ದೇರಳಕಟ್ಟೆಯಲ್ಲಿನ ಅಜ್ಜನ ಕಟ್ಟೆ ಇದೀಗ ಫಿಜಾ ಗ್ರೂಪ್ ಕಾರಣದಿಂದ ಅಪಾಯದ ಸ್ಥಿತಿಗೆ ಸಿಲುಕಿದೆ. ಈ ಬಗ್ಗೆ ಭಾಕ್ತಾದಿಗಳು ಆತಂಕಕ್ಕೆ ಒಳಗಾಗಿದ್ದು ಜಿಲ್ಲಾಡಳಿತ ಮಧ್ಯಪ್ರವೇಶಕ್ಕೆ ಒತ್ತಾಯಿಸಿದ್ದಾರೆ.
ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಯ ಮುಂಭಾಗದಲ್ಲಿರುವ ಅಜ್ಜನ ಕ್ಷೇತ್ರದ ಸುತ್ತ ಫಿಜಾ ಗ್ರೂಪ್ ನ ಜೆಸಿಬಿಗಳು ನೆಲವನ್ನು ಬಹು ಆಳವಾಗಿ ಅಗೆದು ಸಮತಟ್ಟು ಮಾಡಿದೆ. ಇದರಿಂದ ಅಜ್ಜನ ಕ್ಷೇತ್ರ ಕ್ರಮೇಣ ಕುಸಿಯುವ ಸ್ಥಿತಿಗೆ ತಲುಪಿದೆ. ಈ ಭಾಗದಲ್ಲಿ ಫಿಜಾ ಗ್ರೂಪ್ ಎಕರೆಗಟ್ಟಲೆ ಜಾಗವನ್ನು ಖರೀದಿಸಿದೆ. ಆ ಜಾಗವನ್ನು ಸಮತಟ್ಟುಗೊಳಿಸುವ ಕೆಲಸ ತುಂಬಾ ದಿನಗಳಿಂದ ನಡೆಯುತ್ತಿದ್ದು ಮಧ್ಯದಲ್ಲಿ ಕಾನೂನಿನ ತೊಡಕಾದ ಹಿನ್ನಲೆಯಲ್ಲಿ ಸ್ವಲ್ಪ ಸಮಯ ಕೆಲಸ ನಿಂತಿತ್ತು. ಇದೀಗ ಮತ್ತೆ ಕೆಲಸ ಆರಂಭವಾಗಿದೆ.
ಇಲ್ಲಿನ ಅಜ್ಜನ ಕ್ಷೇತ್ರದಲ್ಲಿ ತಿಂಗಳಿಗೊಮ್ಮೆ ಕೋಲ ನಡೆಯುತ್ತಿದ್ದು ಇದೀಗ ಅಜ್ಜನ ಕ್ಷೇತ್ರದ ಬುಡಕ್ಕೆ ಪೆಟ್ಟು ಬಿದ್ದ ಕಾರಣ ಭಕ್ತರು ಆತಂಕಗೊಂಡಿದ್ದಾರೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL