HomeCoastalಪುತ್ತೂರು ಮನೆಗಳ್ಳತನ ಪ್ರಕರಣ: ಇಬ್ಬರು ಸ್ಥಳೀಯ ಖದೀಮರು ಅರೆಸ್ಟ್

ಪುತ್ತೂರು ಮನೆಗಳ್ಳತನ ಪ್ರಕರಣ: ಇಬ್ಬರು ಸ್ಥಳೀಯ ಖದೀಮರು ಅರೆಸ್ಟ್

ಪುತ್ತೂರು : ಪುತ್ತೂರಿನ ಬಾಡಿಗೆ ಮನೆಯೊಂದರಿಂದ ಸುಮಾರು 18ಸಾವಿರ ನಗದು ಸೇರಿ ಒಟ್ಟು 75ಸಾವಿರ ಮೌಲ್ಯದ ವಸ್ತುಗಳನ್ನು ಕಳವು ಗೈದ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಖದೀಮರು ಪುತ್ತೂರಿನ ನಿವಾಸಿಗಳಾಗಿದ್ದು ಬಂಧಿತರನ್ನು ಕೂರ್ನಡ್ಕ ನಿವಾಸಿ ಮಹಮ್ಮದ್ ಮುಸ್ತಫ್ಪ (28), ಸವಣೂರು ಚಾಪಳ್ಳ ನಿವಾಸಿ ಶಮೀರ್ (24) ಎಂದು ಗುರುತಿಸಲಾಗಿದೆ.

ಪುತ್ತೂರಿನ ಎ.ಪಿ.ಎಂ.ಸಿ ರಸ್ತೆಯ ಸೂತ್ರಬೆಟ್ಟು ಬಾಡಿಗೆ ಮನೆ ನಿವಾಸಿ ವಿವೇಕಾನಂದ ಅಲಿಯಾಸ್ ಸತ್ಯನಾರಾಯಣ ಅವರು ಜನವರಿ 4ರಂದು ತನ್ನ ಸ್ವಂತ ಊರಾದ ತಮಿಳುನಾಡಿನ ಮಧುರೈಗೆ ಹೋಗಿದ್ದರು. ಅವರ ಅಣ್ಣ ಗೋಪಿನಾಥ ಅವರು ಬಾಡಿಗೆ ಮನೆಗೆ ಬೀಗ ಹಾಕಿ ಅವರಲ್ಲಿದ್ದ ಎರಡು ಬೀಗದ ಕೀಗಳಲ್ಲಿ ಒಂದನ್ನು ಮನೆಯ ಹೊರಗಡೆ ನಿಲ್ಲಿಸಿದ್ದ ಮೋಟಾರು ಸೈಕಲ್ ನ ಬಾಕ್ಸ್ ನಲ್ಲಿಟ್ಟು, ಇನ್ನೊಂದು ಜೊತೆ ಕೀಯನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋಗಿದ್ದರು. ತಮಿಳುನಾಡಿನಿಂದ ಜನವರಿ 8 ರಂದು ವಾಪಾಸು ಬಂದು ನೋಡಿದಾಗ ಮನೆಯ ಬೀಗ ಯಥಾ ಸ್ಥಿತಿಯಲ್ಲಿದ್ದು, ಒಳಗಡೆ ಕಳ್ಳತನವಾಗಿತ್ತು. ಮನೆಯ ಚಾವಡಿ ಕೋಣೆ ಹಾಗು ಮಲಗುವ ಕೋಣೆಯಲ್ಲಿ ಬಟ್ಟೆ ಬರೆಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು ಮನೆಯಲ್ಲಿದ್ದ 18ಸಾವಿರ ನಗದು ಸೇರಿದಂತೆ ಒಟ್ಟು 75ಸಾವಿರ ಮೌಲ್ಯದ ವಸ್ತುಗಳನ್ನು ಕಳ್ಳರು ಕದ್ದು ಎಸ್ಕೇಪ್ ಆಗಿದ್ದರು.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments