
ಮಂಗಳೂರು: ಮಂಗಳೂರಿನ ಎಮ್ಮೆಕೆರೆ ಮೈದಾನದಲ್ಲಿ ಹಾಡುಹಗಲೇ ನೆತ್ತರು ಹರಿದಿದ್ದು ರೌಡಿಶೀಟರ್ ಒಬ್ಬನನ್ನು ದಾರುಣವಾಗಿ ಹತ್ಯೆ ಮಾಡಲಾಗಿದೆ.
ಹತ್ಯೆಯಾದವನನ್ನು ಹೊಯಿಗೆಬಜಾರ್ ನಿವಾಸಿ ರಾಹುಲ್ ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಸ್ಥಳ್ಕಕ್ಕೆ ಪೊಲೀಸರು ದೌಡಾಯಿಸಿದ್ದಾರೆ.
ಎಮ್ಮೆಕೆರೆಯಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳದಿಂದ ರಾಹುಲ್ (26) ನನ್ನ ಅಟ್ಟಾಡಿಸಿಕೊಂಡು ಬಂದ ನಾಲ್ಕು ಮಂದಿಯ ಗುಂಪು ಮೈದಾನದ ಬಳಿ ಬರ್ಬರವಾಗಿ ಹತ್ಯೆ ಮಾಡಿದೆ. ಎಮ್ಮೆಕೆರೆ ತಂಡದ ಮಹೇಂದ್ರ ಹಾಗು ಇತರರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಎರಡು ವರ್ಷದ ಹಿಂದೆ ಹತ್ಯೆಯಾದ ರಾಹುಲ್ ಎಮ್ಮೆಕೆರೆಯ ದಸರಾ ಹುಲಿ ತಂಡದ ಸದಸ್ಯರ ಮನೆಯಲ್ಲಿ ಜಗಳವಾಡಿ ಹತ್ಯೆ ಮಾಡಿದ ಮಹೇಂದ್ರ ಹಾಗು ಇತರ ಸಹಚರರ ಮೇಲೆ ಹಲ್ಲೆ ಮಾಡಿದ್ದ. ಅದೇ ದ್ವೇಷ ಬೆಳೆದು ಈ ಹತ್ಯೆ ಸಂಭವಿಸಿರುವ ಸಾಧ್ಯತೆ ಇದ್ದು ಪೊಲೀಸರು ಸ್ಥಳ ಮಹಜರು ನಡೆಸುತ್ತಿದ್ದಾರೆ.












































