HomeCoastalಸುರತ್ಕಲ್: ಹಣಕಾಸು ವಿಚಾರಕ್ಕೆ ಫಾಜಿಲ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಕೊಲೆ

ಸುರತ್ಕಲ್: ಹಣಕಾಸು ವಿಚಾರಕ್ಕೆ ಫಾಜಿಲ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಅಟ್ಟಾಡಿಸಿ ಕೊಲೆ

ಸುರತ್ಕಲ್: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತನನ್ನು ಮತಾಂಧರು ತಲವಾರು ಧಾಳಿ ಮಾಡಿ ಕೊಲೆ ಮಾಡಿ ಕೋಮು ಸಾಮರಸ್ಯ ಕದಡಿದ ನಂತರ ಮತ್ತೊಂದು ಕೊಲೆ ನಡೆದಿದೆ.

ಮಂಗಳೂರಿನ ಸುರತ್ಕಲ್ಲಿನಲ್ಲಿ ಫಾಜಿಲ್ ಎಂಬಾತನ ಮೇಲೆ ದುಷ್ಕರ್ಮಿಗಳ ತಂಡ ಅಟ್ಟಾಡಿಸಿ ಧಾಳಿ ಮಾಡಿದ್ದು ಗಂಭೀರ ಗಾಯಗೊಂಡ ಫಾಜಿಲ್ ಸಾವಿಗೀಡಾಗಿದ್ದಾರೆ.

ಪ್ರಾಥಮಿಕ ತನಿಖೆಯಿಂದ ಹಣಕಾಸು ವಿಚಾರವಾಗಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಫಾಜಿಲ್‌ನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಆತ ಮೃತಪಟ್ಟಿದ್ದಾನೆ. ಹಣಕಾಸು ವಿಚಾರ ಜತೆಜತೆಗೆ ಲವ್ ಪ್ರಕರಣ ಕೂಡ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರ ಆರಂಭಿಕ ವಿಚಾರಣೆಯಿಂದ ಈ ಕೊಲೆಯಲ್ಲಿ ಕೋಮು ದ್ವೇಷದ ಛಾಯೆ ಇಲ್ಲ ಎಂದು ತಿಳಿದು ಬಂದಿದೆ.

ಮಂಗಲಪೇಟೆಯ ಫಾಜಿಲ್ ಚಪ್ಪಲಿ ಖರೀದಿಗೆಂದು ಬಂದಿದ್ದ ಸಂದರ್ಭ ಅಂಗಡಿ ಎದುರೇ ನಾಲ್ಕು ಜನರ ತಂಡ ಧಾಳಿ ನಡೆಸಿದೆ. ಅಂಗಡಿ ಮುಂಗಟ್ಟು ತುಂಬಾ ರಕ್ತ ಹರಿದಿದ್ದು ಸ್ಥಳದಲ್ಲಿ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments