HomeCoastalಅಕ್ರಮ ಗೋ ಮಾಂಸ ಸಾಗಾಟ: ಮಂಗಳೂರು ತಲಪಾಡಿಯಲ್ಲಿ 200 ಕೆಜಿ ಮಾಂಸ, ಕಾರು ಸಹಿತ ಇಬ್ಬರು...

ಅಕ್ರಮ ಗೋ ಮಾಂಸ ಸಾಗಾಟ: ಮಂಗಳೂರು ತಲಪಾಡಿಯಲ್ಲಿ 200 ಕೆಜಿ ಮಾಂಸ, ಕಾರು ಸಹಿತ ಇಬ್ಬರು ಅರೆಸ್ಟ್

ಮಂಗಳೂರು: ಕೇರಳದಿಂದ ಮಂಗಳೂರಿಗೆ ಓಮಿನಿ ಕಾರಿನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಿಸುತ್ತಿದ್ದ ಇಬ್ಬರು ಖದೀಮರನ್ನು ತಲಪಾಡಿಯಲ್ಲಿ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 200 ಕೆಜಿಯಷ್ಟು ಮಾಂಸ, ಓಮಿನಿ ಕಾರನ್ನು ವ್ಹಶಪಡಿಸಿಕೊಳ್ಳಲಾಗಿದೆ.

ಕೇರಳ ಉಪ್ಪಳದ ಮೂಸೋಡಿ ಅಡಕ ನಿವಾಸಿ ಮೊಹಮ್ಮದ್ ನೌಫಾಲ್, ಮಂಜೇಶ್ವರ ಹೊಸಬೆಟ್ಟು ನಿವಾಸಿ ಮೊಹಮ್ಮದ್ ಆಸೀಫ್ ಬಂಧಿತರು. ಗೋಮಾಂಸವನ್ನು ಕೇರಳದಿಂದ ತಂದು ಮಂಗಳೂರಿನಲ್ಲಿ ಮಾರಾಟ ಮಾಡಲು ತಯಾರಿ ನಡೆಸುತ್ತಿದ್ದ ಮಾಹಿತಿ ಪಡೆದ ಪೊಲೀಸರು ತಲಪಾಡಿ ಚೆಕ್ ಪೋಸ್ಟಿನಲ್ಲಿ ತಪಾಸಣೆ ನಡೆಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಉಳ್ಳಾಲ ಠಾಣಾಧಿಕಾರಿ ಸಂದೀಪ್ ನೇತೃತ್ವದಲ್ಲಿ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments