Coastal

ಉಳ್ಳಾಲ ಕೋಟೆಕಾರು: ದರೋಡೆಗೆ ಹೊಂಚು ಹಾಕುತ್ತಿದ್ದ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳ ಬಂಧನ

ಉಳ್ಳಾಲ: ಉಳ್ಳಾಲದ ಕೋಟೆಕಾರು ಬೀರಿ ಬಳಿ ಅಂಗಡಿಗಳ ಬಳಿ ಕಬ್ಬಿಣದ ರಾಡಿನ ಜೊತೆಗೆ ಅನುಮಾನಾಸ್ಪದವಾಗಿ ಕುಳಿತಿದ್ದ ಇಬ್ಬರನ್ನು ಗಸ್ತು ತಿರುಗುತ್ತಿದ್ದ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಬೀರಿ ಬಳಿ ಅಂಗಡಿ, ಎಟಿಎಂ, ಮನೆಗಳನ್ನು ದರೋಡೆ ನಡೆಸುವ ಹುನ್ನಾರ ಇಟ್ಟುಕೊಂಡು ಕುಳಿತಿರುವ ಅನುಮಾನದಿಂದ ಪ್ರಕರಣ ದಾಖಲಿಸಲಾಗಿದೆ.

ಮುಕ್ಕಚ್ಚೇರಿಯ ರಾಯಿಸ್ ಖಾನ್ (23) ಕುಂಪಲ ಯತೀಂ ಖಾನದ ಮಹಮ್ಮದ್ ಮುಜಾಂಬಿಲ್ (28) ಬಂಧಿತರಾಗಿದ್ದಾರೆ.

ರಾಯಿಸ್ ಖಾನ್ ಹಾಗು ಮಹಮ್ಮದ್ ಮುಜಾಂಬಿಲ್ ರಾಷ್ಟ್ರೀಯ ಹೆದ್ದಾರಿ 66ರ ಕೋಟೆಕಾರು ಗ್ರಾಮದ ಬೀರಿ ಜಂಕ್ಷನ್ನಿನ ಬಳಿಯ ಅಂಗಡಿಗಳ ಬಾಗಿಲ ಬಳಿ ಕತ್ತಲಲ್ಲಿ ಕುಳಿತಿದ್ದರು. ಈ ಸಂದರ್ಭ ರಾತ್ರಿ ಗಸ್ತು ತಿರುಗುತ್ತಿದ್ದ ಉಳ್ಳಾಲ ಪೊಲೀಸರು ಅವರನ್ನು ಹಿಡಿದು ವಿಚಾರಿಸಿದಾಗ ಸರಿಯಾಗಿ ಉತ್ತರಿಸದೇ ತಡಬಡಾಯಿಸಿದ್ದು, ನಂತರ ಸಂಚಿನ ಅನುಮಾನದ ಮೇರೆಗೆ ಬಂಧಿಸಲಾಗಿದೆ. ಬಂಧನದ ವೇಳೆ ಅವರ ಬಳಿ ಕಬ್ಬಿಣದ ರಾಡ್ ಪತ್ತೆಯಾಗಿದೆ.

Exit mobile version