
ಬಂಟ್ವಾಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ಇದರ ತಾಲೂಕು ಅಭ್ಯಾಸ ವರ್ಗವು ಶನಿವಾರ ಪೆಬ್ರವರಿ 5ರಂದು ಬಂಟ್ವಾಳ ಬಿ.ಸಿ ರೋಡಿನ ಗೀತಾಂಜಲಿ ಸಬಾ ಭವನದಲ್ಲಿ ನಡೆಯಿತು. ಅಭ್ಯಾಸ ವರ್ಗದ ಸಮಾರೋಪ ಸಮಾರಂಭದಲ್ಲಿ ಕೃಷಿ ಕ್ಷೇತ್ರದಲ್ಲಿನ ಅನನ್ಯ ಸಾಧನೆಗಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಬಂಟ್ವಾಳದ ಅಮೈ ಮಹಾಲಿಂಗ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.
ಅಭ್ಯಾಸ ವರ್ಗ ಕಾರ್ಯಕ್ರಮವನ್ನು ನಿವೃತ್ತ ಯೋಧರು ಹಾಗು ಇಂಡಿಯಾನಾ ಹಾಸ್ಪಿಟಲ್ ಮಂಗಳೂರು ಇಲ್ಲಿನ ಫಿಸಿಯೋಥೆರಪಿ ವಿಭಾಗದ ಮುಖ್ಯಸ್ಥರಾದ ಡಾ. ವೆಂಕಟೇಶ್ ಕುಂಪಲ ಇವರು ಉದ್ಘಾಟಿಸಿದರು. ಉದ್ಘಾಟನೆಗೈದು ಮಾತನಾಡಿದ ಡಾ. ವೆಂಕಟೇಶ್ ಕುಂಪಲ ಅವರು ಎಬಿವಿಪಿಯ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಸಂಪನ್ಮೂಲ ವ್ಯಕ್ತಿಗಳಾಗಿ ಮಣಿಕಂಠ ಕಳಸ, ಸಂದೇಶ್ ರೈ ಮಜಕ್ಕಾರ್, ನಿಶಾನ್ ಆಳ್ವ ಅವರುಗಳು ಭಾಗವಹಿಸಿ ಅಭ್ಯಾಸ ವರ್ಗವನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಮಣಿಕಂಠ ಕಳಸ, ವಿಭಾಗ ಸಂಚಾಲಕರಾದ ಹರ್ಷಿತ್ ಕೊಯಿಲ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಶ್ರೀ ಲಕ್ಷ್ಮೀ ಮಠದಮೂಲೆ, ಬಂಟ್ವಾಳ ನಗರ ಕಾರ್ಯದರ್ಶಿ ನಾಗರಾಜ್ ಶೆಣೈ, ಎಬಿವಿಪಿ ಜಿಲ್ಲಾ ಸಂಚಾಲಕರಾದ ನಿಶಾನ್ ಆಳ್ವ, ಬಂಟ್ವಾಳ ತಾಲೂಕು ಸಂಚಾಲಕ ದಿನೇಶ್ ಕೊಯಿಲ, ಸಹ ಸಂಚಾಲಕ ಅಖಿಲಾಶ್ ಉಪಸ್ಥಿತರಿದ್ದರು. ಸಿದ್ದಕಟ್ಟೆ ನಗರ ಕಾರ್ಯದರ್ಶಿ ಗುರುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.












































