HomeCoastalರಸ್ತೆ ಕುಸಿತ: ಮಂಗಳೂರು ಬೆಂಗಳೂರು ಹೆದ್ದಾರಿಯ ಶಿರಾಡಿ ಘಾಟ್ ರಸ್ತೆಯಲ್ಲಿ ಪ್ರಯಾಣ ನಿಷೇಧ

ರಸ್ತೆ ಕುಸಿತ: ಮಂಗಳೂರು ಬೆಂಗಳೂರು ಹೆದ್ದಾರಿಯ ಶಿರಾಡಿ ಘಾಟ್ ರಸ್ತೆಯಲ್ಲಿ ಪ್ರಯಾಣ ನಿಷೇಧ

ಸಕಲೇಶಪುರ: ಮಂಗಳೂರು ಬೆಂಗಳೂರು ಸಂಪರ್ಕ ರಸ್ತೆಯ ಸಕಲೇಶಪುರದ ಬಳಿ ಶಿರಡಿ ಘಾಟ್ ರಸ್ತೆ ಕುಸಿದಿದ್ದು ಎಲ್ಲ ರೀತಿಯ ವಾಹನ ಸಂಚಾರವನ್ನು ನಿಷೇಧಿಸಿ ಹಾಸನ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಕಳೆದ ಎರಡು ದಿನದ ಹಿಂದೆ ದೋಣಿಗಲ್ ನಲ್ಲಿ ಭೂ ಕುಸಿತ ಉಂಟಾಗಿ ಘಾನಾ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು. ಆದರೆ ಲಘು ವಾಹನಗಳಿಗೆ ಅನುವು ಮಾಡಿಕೊಡಲಾಗಿತ್ತು. ಇದೀಗ ಮತ್ತೆ ಭೂ ಕುಸಿತ ಉಂಟಾಗಿ ರಸ್ತೆ ಪ್ರಯಾಣಕ್ಕೆ ಅಪಾಯಕಾರಿಯಾಗಿ ಪರಿಣಮಿಸಿರುವುದರಿಂದ ಎಲ್ಲಾ ರೀತಿಯ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.

ಕಳೆದ ಹತ್ತು ದಿನಗಳಿಂದಲೂ ಸತತ ಮಳೆ ಸುರಿಯುತ್ತಿದ್ದು ಮತ್ತಷ್ಟು ಭೂ ಕುಸಿತ ಸಂಭವಿಸುವ ಭೀತಿ ಎದುರಾಗಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments