Karnataka

ಕೋವಿಡ್ ನೆಗೆಟಿವ್ ರಿಪೋರ್ಟ್ ಇಲ್ಲದೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುತ್ತಿದ್ದ 41 ಪ್ರಯಾಣಿಕರನ್ನು ವಾಪಾಸ್ ಕಳುಹಿಸಿದ ಪೊಲೀಸರು

ಬೆಳಗಾವಿ : ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇಲ್ಲದೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಎರಡು ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದ 41 ಪ್ರಯಾಣಿಕರನ್ನು ಕರ್ನಾಟಕ ಗಡಿಯಲ್ಲಿ ತಡೆದು ವಾಪಸು ಕಳುಹಿಸಲಾಗಿದೆ. ಈ ಪ್ರಯಾಣಿಕರು ಶರ್ಮ ಟ್ರಾವೆಲ್ಸ್ ಹಾಗು ನ್ಯಾಷನಲ್ ಟ್ರಾವೆಲ್ಸ್ ನಲ್ಲಿ ಪ್ರಯಾಣಿಸುತ್ತಿದ್ದರು. ಇದೀಗ ಅವೆರಡೂ ಬಸ್ಸುಗಳನ್ನು ವಾಪಸು ಕಳುಹಿಸಲಾಗಿದೆ.

ಕೋಗನಲ್ಲಿ ಚೆಕ್-ಪೋಸ್ಟ್ ಬಳಿ ಬಸ್ಸುಗಳನ್ನು ತಡೆದು ಪರಿಶೀಲಿಸಿದಾಗ ಶರ್ಮ ಟ್ರಾವೆಲ್ಸ್ ಅಲ್ಲಿ ಪ್ರಯಾಣಿಸುತ್ತಿದ್ದ 28 ಪ್ರಯಾಣಿಕರ ಪೈಕಿ 24 ಮಂದಿಯಲ್ಲಿ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇರಲಿಲ್ಲ. ಮತ್ತೊಂದು ಬಸ್ಸು ನ್ಯಾಷನಲ್ ಟ್ರಾವೆಲ್ಸ್ ನಲ್ಲಿ ಪ್ರಯಾಣಿಸುತ್ತಿದ್ದ 28 ಪ್ರಯಾಣಿಕರ ಪೈಕಿ 17 ಜನರಲ್ಲಿ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇರಲಿಲ್ಲ. ಹಾಗಾಗಲಿ ಈ 41 ಪ್ರಯಾಣಿಕರ ಸಹಿತ 2 ಎರಡೂ ಬಸ್ಸುಗಳನ್ನು ವಾಪಸು ಮಹಾರಾಷ್ಟ್ರಕ್ಕೆ ಕಳುಹಿಸಿಕೊಡಲಾಗಿದೆ.

ಬಸ್ಸಿನ ಸಿಬ್ಬಂದಿಗಳಾದ ಅಸ್ಲಾಂ ಉಲ್ಲಾಖಾನ್, ಟಿಪ್ಪು ಸುಲ್ತಾನ್, ನೇಮತುಲ್ಲಾ ಖಾನ್ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಯಡಿ ನಿಪ್ಪಾಣಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Exit mobile version