Karnataka

ದಲಿತರನ್ನು ದೇಗುಲದ ಒಳಗೆ ಬಿಡ್ತಾರಾ? ನಾವು ಇಲ್ಲಿಂದಲೇ ನಮಸ್ಕಾರ ಮಾಡ್ಬೇಕು ಅಲ್ವಾ?: ಸಚಿವ RB ತಿಮ್ಮಾಪುರ ಪ್ರಶ್ನೆ

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಆರ್ ಬಿ ತಿಮ್ಮಾಪುರ, ಹಿಂದೂ ಧರ್ಮ ಅನ್ನೋದು ಯಾರೊಬ್ಬರ ಆಸ್ತಿಯಲ್ಲ. ನಾವು ಆಂಜನೇಯ ದೇವಸ್ಥಾನದಿಂದ ಹೊರಗೆ ನಿಂತವರು. ದಲಿತರನ್ನ ದೇವಸ್ಥಾನದ ಒಳಗೆ ಕರೆಯುವುದಿಲ್ಲವಲ್ಲ. ದಲಿತರನ್ನ ದೇವಸ್ಥಾನದ ಒಳಗೆ ಕರೆಯುತ್ತಾರಾ? ಊರಿನ ಒಳಗಿನ ದೇವಸ್ಥಾನಕ್ಕೆ ಕರೆಯುವುದಿಲ್ಲ. ರಾಮ ಮಂದಿರ ಎಷ್ಟರ ಮಟ್ಟಿಗೆ ದೇವರು ನಮಗೆ ಎಂದು ಪ್ರಶ್ನಿಸಿದರು.

ಇಲ್ಲಿಂದನೇ ನಾವು ನಮಸ್ಕಾರ ಮಾಡಬೇಕು ಅಲ್ಲವಾ? ಅಲ್ಲಿಗೆ ಹೋಗಲೇಬೇಕು ಅಂತ ಏನು ಇಲ್ವಲ್ಲಾ ಎಂದ ಆರ್‌ಬಿ ತಿಮ್ಮಾಪುರ, ದಲಿತರನ್ನ ಒಳಗೆ ಕರೆಯುತ್ತಿದ್ದಾರಾ? ಹಿಂದೂ ಹಿಂದೂ ಮಾತನಾಡುವವರು ಮೊದಲು ದಲಿತರ ಬಗ್ಗೆ ಮಾತನಾಡಲಿ. ಹಿಂದೂ ಅಂದ್ರೆ ದಲಿತರು ಇದ್ದಾರೋ ಇಲ್ಲವೋ‌ ಅಂತ ಹೇಳಲಿ. ಇದ್ರೆ ದಲಿತರ ಸಂಸ್ಕ್ರತಿ ಸಂಸ್ಕಾರದಲ್ಲಿ ಅವರನ್ನು ಅಳವಡಿಸಿಕೊಳ್ಳಲಿ ಎಂದರು.

Exit mobile version