
ಬೆಂಗಳೂರು: ತೆರಿಗೆ ಬಾಕಿಗಾಗಿ ಸದಾ ಸುದ್ದಿಯಾಗುತ್ತಿರುವ ಮಂತ್ರಿ ಮಾಲ್ ಇಂದು ಮತ್ತೆ ಅದೇ ವಿಷಯಕ್ಕೆ ಸುದ್ದಿಯಾಗಿದೆ. 51 ಕೋಟಿ ರೂಪಾಯಿ ತೆರಿಗೆ ಬಾಕಿಯನ್ನು ಪಾವತಿಸದ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಲ್ಲೇಶ್ವರಂನಲ್ಲಿರುವ ಮಂತ್ರಿ ಸ್ಕ್ವೇರ್ ಮಾಲ್‌ಗೆ ಮತ್ತೊಮ್ಮೆ ಬೀಗ ಜಡಿದಿದೆ.
ಹಲವು ನೋಟೀಸ್ ಗಳ ಬಳಿಕ ಬಿಬಿಎಂಪಿ ಕಂದಾಯ ವಿಭಾಗದ ಸಿಬ್ಬಂದಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಮಾಲ್‌ಗೆ ಬೀಗ ಜಡಿದಿದ್ದಾರೆ. ಈ ಹಿಂದೆ ಹಲವು ಬಾರಿ ಮಾಲ್ ಆಡಳಿತ ಮಂಡಳಿಯಿಂದ ಬಾಕಿ ಹಣ ಪಾವತಿಸುವಂತೆ ನೋಟಿಸ್ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಕಳೆದ ಬಾರಿ ಮಂತ್ರಿ ಮಾಲ್ ಸುಮಾರು ನಲವತ್ತ ಮೂರು ಕೋಟಿ ರೂಪಾಯಿಗಳಷ್ಟು ತೆರಿಗೆ ಬಾಕಿ ಉಳಿಸಿಕೊಂಡಿದ್ದಾಗ ಮಂತ್ರಿ ಮಾಲ್ ಕಚೇರಿಯ ಕುರ್ಚಿ, ಟೇಬಲ್, ಕಂಪ್ಯೂಟರ್ ಗಳನ್ನು ಬಿಬಿಎಂಪಿ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದರು.












































