HomeKarnatakaಬೆಳಗಾವಿ: ಮದುವೆ ಮುಗಿಸಿ ವಾಪಸ್ ಬರುವಾಗ ಮರಕ್ಕೆ ಗುದ್ದಿದ ಕಾರು: ಆರು ಮಂದಿ ಸ್ಪಾಟ್ ಡೆತ್

ಬೆಳಗಾವಿ: ಮದುವೆ ಮುಗಿಸಿ ವಾಪಸ್ ಬರುವಾಗ ಮರಕ್ಕೆ ಗುದ್ದಿದ ಕಾರು: ಆರು ಮಂದಿ ಸ್ಪಾಟ್ ಡೆತ್

ಬೆಳಗಾವಿ: ಮದುವೆ ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಪರಿಣಾಮ ಸ್ಥಳದಲ್ಲೇ ಆರು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ಸಾವಿಗೀಡಾದವರನ್ನು ಕಾರು ಚಾಲಕ ಶಾರುಖ್ ಪೆಂಡಾರಿ, 50 ವರ್ಷದ ಇಕ್ಬಾಲ್ ಜಮಾದಾರ್, 37 ವರ್ಷದ ಶಬನಮ್ ಲಂಗೋಟಿ, 17 ವರ್ಷದ ಸಾನಿಯಾ ಲಂಗೋಟಿ, 12 ವರ್ಷದ ಉಮರ್ ಲಂಗೋಟಿ ಮತ್ತು 13 ವರ್ಷದ ಫರಾನ್ ಲಂಗೋಟಿ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಧಾರವಾಡ ಮೂಲದವರು ಎಂದು ತಿಳಿದು ಬಂದಿದೆ.

ಮಾರುತಿ ಸ್ವಿಫ್ಟ್ ಕಾರಿನಲ್ಲಿ ಸುಮಾರು 10 ಮಂದಿ ಮದುವೆ ಮುಗಿಸಿ ವಾಪಸ್‌ ಮರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಮಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ನಾಲ್ವರು ಗಾಯಾಳುಗಳನ್ನು ಸ್ಥಳೀಯ ಹಾಗೂ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

ಪ್ರಮುಖ ಸುದ್ದಿಗಳು

Recent Comments