
ಬೀದರ್: ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದ್ದು, ವಿಷಯ ತಿಳಿಯದೆ ಅದೇ ಟ್ಯಾಂಕ್ ನೀರನ್ನು ಸುಮಾರು 7-8 ದಿನಗಳಿಂದ ಬಳಸುತ್ತಿದ್ದ ಗ್ರಾಮಸ್ಥರು ಇದೀಗ ಬೆಚ್ಚಿ ಬಿದ್ದಿದ್ದಾರೆ.
ಈ ಘಟನೆ ಬೀದರ್‌ನ ಆಣದೂರ ಗ್ರಾಮದಲ್ಲಿ ನಡೆದಿದ್ದು, ಕುಡಿಯುವ ನೀರಿನ ಓವರ್ ಹೆಡ್ ವಾಟರ್ ಟ್ಯಾಂಕ್‌ನಲ್ಲಿ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದ ಕೆಲ ದಿನಗಳಿಂದ ಆ ಟ್ಯಾಂಕ್ ನೀರು ಕುಡಿದ ಗ್ರಾಮಸ್ಥರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ.
ಕೆಲ ದಿನಗಳಿಂದ ಗ್ರಾಮದ ಮನೆಗಳಿಗೆ ಸರಬರಾಜು ಮಾಡುತ್ತಿದ್ದ ನೀರು ವಾಸನೆ ಬರುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಕುಡಿಯುವ ನೀರಿಗೆ ಚರಂಡಿ ನೀರು ಏನಾದರೂ ಮಿಶ್ರಣ ಆಗಿದೆಯೇ ಅನುಮಾನ ಮೂಡಿತ್ತು. ಕೆಲ ದಿನಗಳ ನಂತರ ಮನೆಗೆ ಸರಬರಾಜು ಆಗುತ್ತಿದ್ದ ನೀರಲ್ಲಿ ಕೂದಲು ಬರುತ್ತಿದ್ದವು. ಈ ವೇಳೆ ಟ್ಯಾಂಕ್ ಪರಿಶೀಲನೆ ಮಡಿದ ಅಧಿಕಾರಿಗಳಿಗೆ ಟ್ಯಾಂಕ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಸಿಕ್ಕಿದೆ. ಇದು ಕೊಲೆಯೋ ಆತ್ಮಹತ್ಯೆಯೋ ಎಂಬುದು ತಿಳಿದಿಲ್ಲ.
ನಮ್ಮ ವಾಟ್ಸಾಪ್ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
https://chat.whatsapp.com/CMUDdTXoFVn7atm3zHYGrd












































