HomeKarnatakaಕರ್ನಾಟಕದಲ್ಲಿ ಹೆಚ್ಚಿದ ಜೆಸಿಬಿ ಮಾಡೆಲ್ ಆಗ್ರಹ: ಕೈಲಾಗದ ಸರಕಾರ ಧೈರ್ಯ ತೋರುವುದೇ?

ಕರ್ನಾಟಕದಲ್ಲಿ ಹೆಚ್ಚಿದ ಜೆಸಿಬಿ ಮಾಡೆಲ್ ಆಗ್ರಹ: ಕೈಲಾಗದ ಸರಕಾರ ಧೈರ್ಯ ತೋರುವುದೇ?

ಬೆಂಗಳೂರು: ಉತ್ತರ ಪ್ರದೇಶದ ಬುಲ್ಡೋಜರ್ ಮಾದರಿಯನ್ನು ಕರ್ನಾಟಕದಲ್ಲಿಯೂ ಅನುಸರಿಸುವಂತೆ ಆಗ್ರಹ ಹೆಚ್ಚಾಗುತ್ತಿದ್ದು ಮುಸ್ಲಿಂ ಮತಾಂಧರಿಂದ ಅದೆಷ್ಟೇ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಗೊಂಡರೂ ಸುಮ್ಮನಿರುವ ಕೈಲಾಗದ ರಾಜ್ಯ ಬಿಜೆಪಿ ಸರಕಾರ ಧೈರ್ಯ ತೋರುವುದೇ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದಲ್ಲಿ ಕೋಮುಗಲಭೆ ಪ್ರಕರಣಗಳನ್ನು ಎದುರಿಸಲು ಯೋಗಿ ಆದಿತ್ಯನಾಥ್ ಅವರ ಮಾದರಿಯ ಬೇಡಿಕೆ ಹೆಚ್ಚುತ್ತಿದೆ. ದೆಹಲಿ ಎನ್‌ಡಿಎಂಸಿ ಜಹಾಂಗೀರ್‌ಪುರಿಯಲ್ಲಿ ಮಾಡಿದಂತೆ, ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಇತ್ತೀಚಿನ ಖರ್ಗೋನ್ ಹಿಂಸಾಚಾರದ ಬಳಿಕ ಮಾಡಿದಂತೆ, ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಕೋಮುಗಲಭೆಗಳಿಗೂ ಈ ಮಾದರಿಯನ್ನು ಅಳವಡಿಸುವಂತೆ ಸ್ವಪಕ್ಷೀಯರೇ ರಾಜ್ಯ ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.

ಕಳೆದ ಡಿಜೆಹಳ್ಳಿ ಗಲಭೆ, ಇತ್ತೀಚಿನ ಹುಬ್ಬಳ್ಳಿ ಗಲಭೆ ಸಂದರ್ಭ ಹಲವಾರು ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿಗೊಳಗಾಗಿತ್ತು. ಪೊಲೀಸ್ ವಾಹನಗಳನ್ನು ಉಡೀಸ್ ಮಾಡಲಾಗಿತ್ತು, ಕೆಲವಕ್ಕೆ ಬೆಂಕಿ ಹಚ್ಚಿ ಭಸ್ಮ ಮಾಡಲಾಗಿತ್ತು. ಆಗಿದ್ದರೂ ರಾಜ್ಯ ಬಿಜೆಪಿ ಸರಕಾರ ಆರೋಪಿಗಳ ವಿರುದ್ಧ ತಕ್ಷಣದ ಕ್ರಮಕ್ಕೆ ಮುಂದಾಗಿಲ್ಲ.

ಇನ್ನೊಂದೆಡೆ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್, ರಾಷ್ಟ್ರೀಯ ಪದಾಧಿಕಾರಿ ಸಿ.ಟಿ ರವಿ, ಮಂತ್ರಿಗಳಾದ ಸುನಿಲ್ ಕುಮಾರ್ ಮುಂತಾದವರು ಹೇಳಿಕೆಗಳನ್ನು ನೀಡುತ್ತಾ ಮಾತಲ್ಲೇ ಮನೆಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆಯೇ ಹೊರತು ಅಗತ್ಯವಾದ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳನ್ನು ಒಪ್ಪಿಸುವ ಕಾರ್ಯಗಳು ನಡೆಯುತ್ತಿಲ್ಲ

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments