HomeKarnatakaಕೋರ್ಟ್ ಆದೇಶ ವಿರೋಧಿಸಿ ರಾಜ್ಯ ಬಂದ್ ಕರೆ: ಮತ್ತಷ್ಟು ಪ್ರಚೋದನೆ ನೀಡುತ್ತಿರುವ ಜಮಾತ್ ಇಸ್ಲಾಂ, ಸಮಾಜದ...

ಕೋರ್ಟ್ ಆದೇಶ ವಿರೋಧಿಸಿ ರಾಜ್ಯ ಬಂದ್ ಕರೆ: ಮತ್ತಷ್ಟು ಪ್ರಚೋದನೆ ನೀಡುತ್ತಿರುವ ಜಮಾತ್ ಇಸ್ಲಾಂ, ಸಮಾಜದ ಸ್ವಾಸ್ಥ್ಯ ಕೆಡವಲು ಸಂಚು

ಬೆಂಗಳೂರು: ಹಿಜಾಬ್ ವಿದ್ಯಾರ್ಥಿನಿಯರಿಗೆ ಮತ್ತಷ್ಟು ಪ್ರಚೋದನೆ ನೀಡುವ ಕಾರ್ಯಕ್ಕೆ ಕೈ ಹಾಕಿರುವ ಜಮಾತ್ ಇಸ್ಲಾಂ ಸಂಘಟನೆ ನಾಳೆ (ಗುರುವಾರ) ಕರ್ನಾಟಕ ರಾಜ್ಯ ಬಂದ್ ಗೆ ಕರೆ ಕೊಟ್ಟಿದೆ. ವಿದ್ಯಾರ್ಥಿನಿಯರಿಗೆ ವಿಷಯವನ್ನು ಬಿಡಿಸಿ ಹೇಳಿ ಕಾಲೇಜಿನಲ್ಲಿ ತರಗತಿಯೊಳಗೆ ಸಮವಸ್ತ್ರ ನಿಯಮ ಪಾಲನೆಯನ್ನು ಮಾಡುವಂತೆ ಮನವೊಲಿಸುವ ಕಾರ್ಯ ಬಿಟ್ಟು ಇದೀಗ ಮತ್ತಷ್ಟು ರೊಚ್ಚಿಗೆಬ್ಬಿಸಿ ಸಮಾಜದ ಸ್ವಾಸ್ಥ್ಯ ಕೆಡವುವ ಎಲ್ಲಾ ತಂತ್ರಗಾರಿಕೆಯನ್ನು ಮುಸ್ಲಿಂ ಸಂಘಟನೆಗಳು ಮಾಡಿಕೊಂಡಂತೆ ಕಾಣುತ್ತಿವೆ.

ಗುರುವಾರ ಒಂದು ದಿನ ಮುಸ್ಲಿಂ ಸಮುದಾಯದ ಎಲ್ಲ ವಿದ್ಯಾರ್ಥಿಗಳು ಶಾಲೆ ಕಾಲೇಜನ್ನು ಬಹಿಷ್ಕರಿಸಿ ಮನೆಯಲ್ಲಿರುವಂತೆ ಹಾಗು ಮುಸ್ಲಿಂ ಮತೀಯರ ಎಲ್ಲ ಶೈಕ್ಷಣಿಕ ಹಾಗು ವ್ಯಾಪಾರ ಸಂಸ್ಥೆಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚುವಂತೆ ಜಮಾತ್ ಇಸ್ಲಾಂ ಕರೆ ಕೊಟ್ಟಿದೆ. ಯಾವುದೇ ರ್ಯಾಲಿಗಳನ್ನು ನಡೆಸದೆ ಶಾಂತಿಯುತವಾಗಿ ವ್ಯವಹರಿಸಿ ಎಂದು ಜಮಾತ್ ಇಸ್ಲಾಂ ಹೇಳಿದ್ದರೂ ಈ ಬಂದ್ ನಡೆಯು, ವಿದ್ಯಾರ್ಥಿನಿಯರು ಹಾಗು ಸಮಾಜದ ಮತಾಂಧರನ್ನು ಮತ್ತಷ್ಟು ರೊಚ್ಚಿಗೇಳಲು ಹಾಗು ಕೋರ್ಟ್ ಆದೇಶವನ್ನು ಧಿಕ್ಕರಿಸಲು ಪ್ರೇರೇಪಣೆ ಮಾಡುವುದು ಖಂಡಿತ.

ಶಾಲಾ ಸಮವಸ್ತ್ರ ನಿಯಮದಿಂದ ಧಾರ್ಮಿಕ ಹಕ್ಕಿನ ಉಲ್ಲಂಘನೆ ಆಗುವುದಿಲ್ಲ. ತರಗತಿ ಒಳಗೆ ಸಮವಸ್ತ್ರ ಧರಿಸುವುದನ್ನು ವಿದ್ಯಾರ್ಥಿಗಳು ಪಾಲಿಸಬೇಕು, ಇದಕ್ಕೂ ಧಾರ್ಮಿಕ ಹಕ್ಕಿಗೂ ಸಂಬಂಧ ಕಟ್ಟಲು ಬರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದ್ದರೂ ಜಮಾತ್ ಇಸ್ಲಾಂ ನ ಪ್ರಮುಖರು ಇಂದು ಪ್ರತಿಕಾಗೋಷ್ಠಿಯಲ್ಲಿ ನಮ್ಮ ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೇಳುತ್ತಾರೆ. ಅಂದರೆ ಇವರ ಬುದ್ಧಿಮತ್ತೆ ಎಷ್ಟಿದೆ ಎಂಬ ಅರಿವಾಗುತ್ತದೆ.

ಕೋರ್ಟ್ ಅಂತಿಮ ಆದೇಶದ ನಂತರ ಪತ್ರಿಕಾಗೋಷಿಯಲ್ಲಿ ಕುಳಿತು ದೊಡ್ಡ ಪಂಡಿತರಂತೆ ಮಾತನಾಡಿದ ಎಳಸು ವಿದ್ಯಾರ್ಥಿನಿಯರು ಕೋರ್ಟ್ ಆದೇಶ ಏನು ಹಾಗು ಸಮವಸ್ತ್ರ ನಿಯಮ ಏನು ಹೇಳಿದೆ ಅನ್ನುವುದನ್ನೂ ಕೂಡ ಕಿಂಚಿತ್ತೂ ಅರ್ಥಮಾಡಿಕೊಂಡಂತೆ ಕಂಡುಬರಲಿಲ್ಲ. ಅಥವಾ ಅರ್ಥ ಮಾಡಿಕೊಳ್ಳುವ ಕಿಂಚಿತ್ತೂ ಬುದ್ಧಿಶಕ್ತಿಯೂ ಆ ದಡ್ಡ ಮನಸ್ಥಿತಿಗಳವರಲ್ಲಿ ಇದ್ದಂತೆ ಅನಿಸುತ್ತಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆ ವಿದ್ಯಾರ್ಥಿನಿಯರ ಮಾತುಗಳನ್ನು ವಾದಗಳನ್ನು ಕೇಳಿ ಆ ಗೋಷ್ಠಿಯಲ್ಲಿದ್ದ ಪತ್ರಕರ್ತರು ಈ ಪಟಲಾಂನ ಪಾಂಡಿತ್ಯಕ್ಕೆ ಒಳಗೊಳಗೇ ಮುಸಿಮುಸಿ ನಕ್ಕಿದ್ದು ಅವರವರಿಗೇ ಗೊತ್ತು.

ಕೆಲವರಂತೂ ಬಿಂದಿ ಕುಂಕುಮ ಬಳೆ ಎಂದು ಹೋಲಿಕೆ ಮಾಡುವುದೂ ಕಂಡು ಬಂತು. ಭಾರತ ದೇಶದ ಸಂಸ್ಕೃತಿ ಬಗ್ಗೆ ತಿಳಿದವರಾರು ಈ ಮಾತನ್ನು ಆಡುತ್ತಿರಲಿಲ್ಲ. ಬಳೆ ಕುಂಕುಮ ಬಿಂದಿಗಳೆಲ್ಲ ಭಾರತದ ಸಂಸ್ಕೃತಿಯ ಪ್ರತೀಕ. ಅವುಗಳು ಈ ದೇಶದ ಸಂಸ್ಕೃತಿ. ಬುರ್ಖಾ, ಹಿಜಾಬ್, ಕೇಸರಿ ಶಾಲು ಸಂಸ್ಕೃತಿ ಅಲ್ಲ. ಅದು ಧಾರ್ಮಿಕ ಆಚರಣೆ ಅನ್ನುವ ಕಿಂಚಿತ್ತೂ ಜ್ಞಾನವೂ ಆ ವಿದ್ಯಾರ್ಥಿನಿಯರುಗಳಿಗೆ ಹಾಗು ಟಿವಿ ಮಾಧ್ಯಮಗಳಲ್ಲಿ ಚರ್ಚೆಗೆ ಕೂರುವ ಮುಸ್ಲಿಂ ಪಂಡಿತರೆಂದು ಕರೆಸಿಕೊಳ್ಳುವವರಿಗೆ ಇದ್ದಂತಿಲ್ಲ. ಇನ್ನು ಸಾಮಾನ್ಯ ಮುಸ್ಲಿಮರಿಗೆ ಇರುವುದೆಂತು ಹೇಳಿ?

ಒಬ್ಬ ಮೇಧಾವಿಗಳು ಕನ್ನಡ ಟಿವಿ ಚಾನಲ್ ಅಲ್ಲಿ ಕುಳಿತುಕೊಂಡು ನಮಗೆ ಈ ದೇಶದ ಕಾನೂನಿನ ಸಂವಿಧಾನದ ಹಾಗು ನ್ಯಾಯಾಲಯದ ಬಗ್ಗೆ ಬಗ್ಗೆ ನಂಬಿಕೆ ಇದೆ, ನಾವು ಸುಪ್ರೀಂ ಕೋರ್ಟ್ ಗೆ ಹೊಗುತ್ತೇವೆ ಎನ್ನುತ್ತಾರೆ. ಆದರೆ ಅದೇ ವ್ಯಕ್ತಿ ರಾಜ್ಯ ನ್ಯಾಯಾಲಯದ ತೀರ್ಪನ್ನು ವಿರೋಧಿಸುತ್ತಾರೆ. ಅದಕ್ಕೂ ಮುಂಚೆ ಕೋರ್ಟಿನ ಮಧ್ಯಂತರ ಆದೇಶವನ್ನೂ ವಿರೋಧಿಸಿದ್ದರು ಮತ್ತು ವಿದ್ಯಾರ್ಥಿನಿಯರು ಕಾಲೇಜು ಆವರಣ ತನಕ ಹಿಜಾಬ್ ಧರಿಸಿ ಬಂದು ವಾಪಸು ಹೋಗುವ ನಾಟಕ ಮಾಡಿ ಗಮನ ಸೆಳೆಯುವ ಯತ್ನ ಮಾಡಿದ್ದರು. ಇಂತಹವರು ನಾಳೆ ಸುಪ್ರೀಂ ಕೋರ್ಟ್ ಆದೇಶ ಅವರ ವಿರುದ್ಧ ಬಂದರೆ ಒಪ್ಪಿಕೊಳ್ಳುತ್ತಾರೆ ಎಂದು ನಂಬುವುದು ಮೂರ್ಖತನ.
ನ್ಯಾಯಾಲಯವನ್ನು (ಹೈಕೋರ್ಟ್) ಧಿಕ್ಕರಿಸುತ್ತೇವೆ ಎನ್ನುತ್ತಾ ನ್ಯಾಯಾಲಯಕ್ಕೆ (ಸುಪ್ರೀಂ ಕೋರ್ಟ್) ಮೇಲ್ಮನವಿ ಸಲ್ಲಿಸುತ್ತಾರೆ. ನ್ಯಾಯಾಲಯವನ್ನು ಧಿಕ್ಕರಿಸುವುದಾದರೆ ಮತ್ತೆ ನ್ಯಾಯಾಲಯದ ಮೆಟ್ಟಿಲೇಕೆ ಏರಬೇಕು?. ಮಾತು ಮಾತಿಗೆ ಸಂವಿಧಾನ ಎನ್ನುವ ಈ ಪಟಾಲಂ ಅದೇ ಸಂವಿಧಾನದ ಅಡಿಯಲ್ಲಿ ರಚಿತವಾದ ನ್ಯಾಯಾಂಗದ ಆದೇಶವನ್ನೇ ಧಿಕ್ಕರಿಸುತ್ತದೆ. ಇವರ ಅನುಕೂಲಕ್ಕೆ ಮಾತ್ರ ಭಾರತೀಯ ಕಾನೂನನ್ನು ಬಳಸುವ ಇವರುಗಳು ಕಾನೂನಿಗೆ ನಿಷ್ಠರಾಗಿ ಇರುವುದು ಅಷ್ಟಕಷ್ಟೇ. ಆಗ ದುತ್ತನೆ ಅವರ ಷರಿಯಾ ಕಾನೂನು ಅವರಿಗೆ ಸಂವಿಧಾನವಾಗಿ ಬಿಡುತ್ತದೆ. ಪ್ರತಿ ಬಾರಿ ಇತಿಹಾಸ ನಮಗೆ ಇದನ್ನು ತೋರಿಸುತ್ತಲೇ ಬಂದಿದೆ.

ಇದೀಗ ಜಮಾತ್ ಇಸ್ಲಾಂ ನೀಡಿರುವ ಬಂದ್ ಕರೆಯ ಪ್ರಚೋದನೆ ಈ ವಿಚಾರವನ್ನು ಯಾವ ದಿಕ್ಕಿಗೆ ಎಳೆದುಕೊಂಡು ಹೋಗುತ್ತದೋ ಕಾದುನೋಡಬೇಕು. ಅವರ ಸಮುದಾಯದ ಪೆದ್ದರಿಗೆ ಅರ್ಥ ಮಾಡಿಸಿಕೊಡುವುದು ಬಿಟ್ಟು ಇದೀಗ ಬಂದ್ ಕರೆ ಮೂಲಕ ಮತ್ತಷ್ಟು ಶಕ್ತಿ ತುಂಬುವ ಕಾರ್ಯ ಮಾಡುತ್ತಿರುವುದು ನಮ್ಮ ದುರದೃಷ್ಟವಷ್ಟೇ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments