HomeKarnatakaಹುಬ್ಬಳ್ಳಿ: ಲಾರಿ ಬಸ್ ಮುಖಾಮುಖಿ ಡಿಕ್ಕಿ, 7 ಮಂದಿ ಸ್ಥಳದಲ್ಲೇ ಸಾವು, 26 ಮಂದಿಗೆ ಗಾಯ

ಹುಬ್ಬಳ್ಳಿ: ಲಾರಿ ಬಸ್ ಮುಖಾಮುಖಿ ಡಿಕ್ಕಿ, 7 ಮಂದಿ ಸ್ಥಳದಲ್ಲೇ ಸಾವು, 26 ಮಂದಿಗೆ ಗಾಯ

ಹುಬ್ಬಳ್ಳಿ: ಇಂದು (ಮಂಗಳವಾರ) ಹುಬ್ಬಳ್ಳಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಮತ್ತು ಪ್ರಯಾಣಿಕ ಬಸ್ ನಡುವೆ ಮುಖಾಮುಖಿ ಢಿಕ್ಕಿಯಾಗಿ 7 ಮಂದಿ ಸಾವನ್ನಪ್ಪಿದ್ದು 26 ಮಂದಿ ಗಾಯಗೊಂಡಿದ್ದಾರೆ.

ಈ ಅಪಘಾತ ಹುಬ್ಬಳ್ಳಿಯ ತಾರಿಹಾಳ ಬೈಪಾಸ್​ನಲ್ಲಿ ಸಂಭವಿಸಿದ್ದು ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ ಸುಮಾರು 12 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಪ್ರಯಾಣಿಕರನ್ನು ಹೊತ್ತು ಕೊಲ್ಹಾಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ನ್ಯಾಷನಲ್ ಟ್ರಾವೆಲ್ಸ್​ ಬಸ್ ಮತ್ತು ಅಕ್ಕಿ ಸಾಗಣೆ ಮಾಡುತ್ತಿದ್ದ ಲಾರಿ ತಾರಿಹಾಳ ಬೈಪಾಸ್ ಸಮೀಪ ಡಿಕ್ಕಿಯಾಗಿತ್ತು.

ಅಪಘಾತದಲ್ಲಿ ಎರಡೂ ವಾಹನಗಳು ನಜ್ಜುಗುಜ್ಜಾಗಿದ್ದು ಲಾರಿಯಲ್ಲಿದ್ದ ಚಾಲಕ, ಕ್ಲೀನರ್ ಸೇರಿ ಮೂವರು ಮೃತಪಟ್ಟರೆ, ಪ್ರಯಾಣಿಕ ಬಸ್​ನಲ್ಲಿದ್ದ​ ಬಸ್ ಚಾಲಕರಾದ ಅತಾವುಲ್ಲಾ, ನಾಗರಾಜು, ಪ್ರಯಾಣಿಕರಾದ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಬಾಬುಸಾಬ್ (55), ಮೈಸೂರಿನ ಮೊಹಮ್ಮದ್ ದಯಾನ್ (17) ಸೇರಿ ಒಟ್ಟು 7 ಮಂದಿ ಸಾವಿಗೀಡಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments