HomeKarnatakaಹಿಂದೂಗಳ ಭಾವನೆ ಸಂಸ್ಕೃತಿಗೆ ಗೌರವ ಕೊಟ್ಟು ಬದುಕಿ: ಮಳಲಿ ದರ್ಗಾ ಕೊಡುವುದಿಲ್ಲ ಎಂದ ಮಜೀದ್'ಗೆ ಮುತಾಲಿಕ್...

ಹಿಂದೂಗಳ ಭಾವನೆ ಸಂಸ್ಕೃತಿಗೆ ಗೌರವ ಕೊಟ್ಟು ಬದುಕಿ: ಮಳಲಿ ದರ್ಗಾ ಕೊಡುವುದಿಲ್ಲ ಎಂದ ಮಜೀದ್’ಗೆ ಮುತಾಲಿಕ್ ತಿರುಗೇಟು

ಮಂಗಳೂರು: ಮಂಗಳೂರಿನ ಅಡ್ಯಾರಿನಲ್ಲಿ ನಡೆದ ಎಸ್.ಡಿ.ಪಿ.ಐ ಸಮಾವೇಶದಲ್ಲಿ ಮಳಲಿ ಜುಮ್ಮಾ ಮಸೀದಿಯನ್ನು ದೇವಸ್ಥಾನ ಮಾಡುವುದು ಕನಸಿನ ಮಾತು ಎಂದು ಹೇಳಿದ್ದ ಎಸ್.ಡಿ.ಪಿ.ಐ ಅಧ್ಯಕ್ಷ ಅಬ್ದುಲ್ ಮಜೀದ್ ಹೇಳಿಕೆಗೆ ಮೈಸೂರಿನಲ್ಲಿ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿರುಗೇಟು ನೀಡಿದ್ದಾರೆ. ಮಳಲಿಯ ಪ್ರಸ್ತುತ ದರ್ಗಾ ಆಗಿ ಪರಿವರ್ತನೆ ಮಾಡಿರುವ ಸಂಪೂರ್ಣ ದೇವಸ್ಥಾನವನ್ನು ಕಾನೂನಿನ ಪ್ರಕಾರವೇ ಪಡೆಯುತ್ತೇವೆ. ನಾಚಿಕೆ, ಮಾನ ಮರ್ಯಾದೆ ಇದ್ದರೆ ಸೌಹಾರ್ದಯುತವಾಗಿ ಬದುಕುವ ಆಸೆ ಇದ್ದರೆ ಕಬಳಿಸಿರುವ ದೇವಸ್ಥಾನ ವಾಪಾಸ್ ಕೊಡಿ. ಇದು ಯಾರ ಅಪ್ಪನ ಸೊತ್ತು ಅಲ್ಲ ಎಂದು ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಹೇಳಿದ್ದಾರೆ. ಇದು ನಮ್ಮ ಅಪ್ಪನದೇ ಏನಿವಾಗ” ಎಂದು ಮುತಾಲಿಕ್ ಗುಡುಗಿದ್ದಾರೆ.

ಅಹಂಕಾರದ ಮಾತು ಬಿಡಿ. ನಮ್ಮ ಧರ್ಮದ ಸಂಪ್ರದಾಯದ ಬಗ್ಗೆ, ತಾಂಬೂಲ ಪ್ರಶ್ನೆ ಬಗ್ಗೆ ಕೆಟ್ಟದಾಗಿ ಮಾತಾಡಿದರೆ ನಾಲಿಗೆ ಸೀಳು ಹಾಕುತ್ತೇವೆ ಮಜೀದ್ ಹೇಳಿಕೆ ಖಂಡಿಸುತ್ತೇನೆ ಮತ್ತು ಆತನ ಮೇಲೆ ಕ್ರಮಕ್ಕೆ ಒತ್ತಾಯಿಸುತ್ತೇನೆ. ಮಳಲಿಯಲ್ಲಿನ ದರ್ಗಾವು ಹಿಂದೂ ದೇವಸ್ಥಾನ ಹಾಗು ವೀರಶೈವ ಮಠವಾಗಿತ್ತು. ಮಜೀದ್ ನೀಡಿದ ಹೇಳಿಕೆ ಇದು ಗಲಭೆಗೆ ಪ್ರಚೋದನೆ ನೀಡುವ ಹೇಳಿಕೆ. ಬರೀ ಮಳಲಿ ದೇವಸ್ಥಾನ ಅಲ್ಲ ದೇಶದ ಎಲ್ಲಾ ದೇವಸ್ಥಾನ ವಾಪಸ್ಸು ಪಡೆಯುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಮುಸ್ಲಿಮರು ಎಲ್ಲಾ ಕೈ ತಪ್ಪುತ್ತಿದೆ ಎಂದು ಹತಾಶರಾಗಿದ್ದಾರೆ. ಸುಮಾರು 30 ಸಾವಿರ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದೀರಿ. ಅವೆಲ್ಲವನ್ನೂ ವಾಪಸ್ಸು ಪಡೆಯುತ್ತೇವೆ. ದಾಳಿ ಮಾಡಿ ವಾಪಸ್ಸು ಪಡೆಯಲ್ಲ. ನ್ಯಾಯಾಲಯದ ಮೂಲಕವೇ ಪಡೆಯುತ್ತೇವೆ. ತಾಂಬೂಲ ಪ್ರಶ್ನೆ ಹೋಮ ಹವನ ಎಲ್ಲವೂ ಸಾಕಷ್ಟು ಶಕ್ತಿಯುತವಾಗಿವೆ ಹಾಗು ವೈಜ್ಞಾನಿಕವಾಗಿದೆ. ಧಾರ್ಮಿಕ ಸಾಧಕರ ಬಗ್ಗೆ ಹಗುರವಾಗಿ ಮಾತನಾಡಿದರೆ ನಾಲಿಗೆ ಸೀಳಿ ಹಾಕುತ್ತೇವೆ ಎಂದು ಮುತಾಲಿಕ್ ತಿರುಗೇಟು ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments