HomeKarnatakaಬೆಳಗಿನ ಉಪಹಾರ, ಮಧ್ಯಾಹ್ನ ಊಟ, ರಾತ್ರಿ ಡಿನ್ನರ್ ಮೂರೂ ಹೊತ್ತು ಮ್ಯಾಗಿ: ಬೇಸತ್ತ ಗಂಡನಿಂದ ಪತ್ನಿಗೆ...

ಬೆಳಗಿನ ಉಪಹಾರ, ಮಧ್ಯಾಹ್ನ ಊಟ, ರಾತ್ರಿ ಡಿನ್ನರ್ ಮೂರೂ ಹೊತ್ತು ಮ್ಯಾಗಿ: ಬೇಸತ್ತ ಗಂಡನಿಂದ ಪತ್ನಿಗೆ ಡೈವೋರ್ಸ್

ಮೈಸೂರು: ಈಗಿನ ಕಾಲದಲ್ಲಿ ಸಣ್ಣ ಸಣ್ಣ ಕಾರಣಕ್ಕೆ ಗಂಡ, ಹೆಂಡತಿ ವಿಚ್ಛೇದನ ಪಡೆದುಕೊಳ್ತಾರೆ. ಹೆಂಡತಿ ಚೆನ್ನಾಗಿಲ್ಲ, ಗಂಡ ಮನೆಗೆ ಬರಲ್ಲ, ಅತಿಯಾಗಿ ಮೊಬೈಲ್ ಬಳಸುತ್ತಾರೆ, ಖರ್ಚಿಗೆ ಹಣಕೊಡಲ್ಲ ಇತ್ಯಾದಿ ಕಾರಣಕ್ಕೆ ಡಿವೋರ್ಸ್ ಕೊಡಲಾಗುತ್ತದೆ. ಇಲ್ಲೊಂದು ವಿಲಕ್ಷಣ ಪ್ರಕರಣದಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗು ರಾತ್ರಿಯ ಭೋಜನ ಹೀಗೆ ಮೂರು ಹೊತ್ತು ಮ್ಯಾಗಿ ಮಾಡಿಕೊಡುತ್ತಿದ್ದ ಹೆಂಡತಿಯ ಮೇಲೆ ಬೇಸತ್ತು ಪತಿಯೊಬ್ಬ ವಿಚ್ಛೇದನ ನೀಡಿದ್ದ ಬಗ್ಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಂ.ಎಲ್.ರಘುನಾಥ್ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಫಾಸ್ಟ್ ಫುಡ್, ರೆಡಿ ಟು ಈಟ್ ಫುಡ್ ಗಳ ಮೇಲೆ ಜನರು ಅವಲಂಬಿತರಾಗುತ್ತಿರುವುದು ಇತ್ತೀಚಿಗೆ ಹೆಚ್ಚಾಗಿದೆ. ಆದರೆ ಅದಕ್ಕೊಂದು ಮಿತಿಯಿದ್ದರೆ ಚಂದ. “ಬಳ್ಳಾರಿಯಲ್ಲಿ ಪತಿಯೊಬ್ಬ ತನ್ನ ಪತ್ನಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ಎಲ್ಲೆಲ್ಲೂ ಮ್ಯಾಗಿ ಮಾಡಿ ಹಾಕುತ್ತಿದ್ದಾಳೆಂದು ಬೇಸತ್ತು ಪತ್ನಿಗೆ ವಿಚ್ಛೇದನ ನೀಡಿದ್ದ. ಅದು ಮ್ಯಾಗಿ ಕೇಸ್ ಎಂದು ಪ್ರಸಿದ್ಧವಾಗಿತ್ತು” ಎಂದು ರಘುನಾಥ್ ಉಲ್ಲೇಖಿಸಿದರು.

ಜೂನ್ 25ರಂದು ಮೈಸೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ಗೆ ಪೂರ್ವಭಾವಿಯಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಡಾ.ಎಂ.ಎಲ್.ರಘುನಾಥ್ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ವೈವಾಹಿಕ ವಿವಾದಗಳು ಹೆಚ್ಚುತ್ತಿದ್ದು, ಸುಮಾರು 800 ಪ್ರಕರಣಗಳು ಅದಾಲತ್‌ಗೆ ಬಂದಿವೆ, ಆದರೆ 32 ಪ್ರಕರಣಗಳಲ್ಲಿ ದಂಪತಿಗಳು ಮತ್ತೆ ಒಂದಾಗಿದ್ದಾರೆ ಅಂತ ಮಾಹಿತಿ ನೀಡಿದ್ರು.

ಬಳ್ಳಾರಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದಾಗ ಈ ಪ್ರಕರಣ ನಡೆದಿತ್ತು. ಮ್ಯಾಗಿ ನೂಡಲ್ಸ್ ಹೊರತುಪಡಿಸಿ ಬೇರೆ ಯಾವುದೇ ಅಡುಗೆ ಮಾಡಲು ನನ್ನ ಹೆಂಡತಿಗೆ ಬರುವುದಿಲ್ಲ. ಉಪಹಾರ, ಮಧ್ಯಾಹ್ನ ಊಟ ಹಾಗೂ ರಾತ್ರಿ ಊಟಕ್ಕೆಲ್ಲಾ ಮ್ಯಾಗಿ ನೂಡೆನ್ಸ್ ಮಾಡುತ್ತಿದ್ದಳು. ಅಂಗಡಿಗೆ ಹೋದರೆ ಆಕೆ ಕೇವಲ ಇನ್‌ಸ್ಟಂಟ್ ನೂಡಲ್ಸ್ ಮಾತ್ರ ತರುತ್ತಿದ್ದಳು ಎಂದು ಡೈವೋರ್ಸ್ ಕೇಸು ದಾಖಲಿಸಿದ್ದ ವ್ಯಕ್ತಿ ಹೇಳಿಕೊಂಡಿದ್ದ. ವಾದ ಪ್ರತಿವಾದದ ಬಳಿಕ ಅಂತಿಮವಾಗಿ ದಂಪತಿಗಳು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದರು ಎಂದು ರಘುನಾಥ್ ಹೇಳಿದ್ದಾರೆ.

“ಜೋಡಿಗಳ ನಡುವೆ ರಾಜಿ ತರಲು ಮತ್ತು ಅವರನ್ನು ಮತ್ತೆ ಒಂದುಗೂಡಿಸಲು ನಾವು ಭಾವನೆಗಳನ್ನು ಬಳಸುತ್ತೇವೆ. ಇಲ್ಲಿ ದೈಹಿಕ ಸಮಸ್ಯೆಗಳಿಗಿಂತ ಮಾನಸಿಕ ಸಮಸ್ಯೆಗಳು ಹೆಚ್ಚು ಕೆಲಸ ಮಾಡುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ, ದಂಪತಿಗಳು ಮತ್ತೆ ಒಂದಾದರೂ, ಮನಸ್ತಾಪಗಳ ಗುರುತುಗಳು ಹಾಗೆಯೇ ಉಳಿಯುತ್ತವೆ. 800-900 ವೈವಾಹಿಕ ಪ್ರಕರಣಗಳಲ್ಲಿ, ನಾವು ಸುಮಾರು 20-30 ಪ್ರಕರಣಗಳಲ್ಲಿ ಯಶಸ್ವಿಯಾಗುತ್ತೇವೆ. ಹಿಂದಿನ ಲೋಕ ಅದಾಲತ್‌ನಲ್ಲಿ ಸುಮಾರು 110 ವಿಚ್ಛೇದನ ಪ್ರಕರಣಗಳಲ್ಲಿ ಕೇವಲ 32 ಪ್ರಕರಣಗಳಲ್ಲಿ ಪುನರ್ಮಿಲನ ನಡೆದಿದೆ ಎಂದು ಅವರು ಈ ಸಂದರ್ಭ ಮಾಹಿತಿ ನೀಡಿದರು.

ಮೈಸೂರಿನಲ್ಲಿ ಜೂನ್ 25 ರಂದು ಆಯೋಜಿಸಲಾದ ಲೋಕ ಅದಾಲತ್‌ನಲ್ಲಿ, ನೆಗೋಶಬಲ್ ಉಪಕರಣಗಳ ಕಾಯಿದೆ, ಮೋಟಾರು ವಾಹನ ಕಾಯ್ದೆ, ಚೆಕ್ ಬೌನ್ಸ್ ಪ್ರಕರಣಗಳು ಮತ್ತು ಬೆದರಿಕೆ, ಸಣ್ಣ ಪ್ರಕರಣಗಳಂತಹ ಮೂರು ವರ್ಷಗಳಿಗಿಂತ ಕಡಿಮೆ ಅವಧಿಯ 2,800 ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಸುಮಾರು 22,000 ಪ್ರಕರಣಗಳನ್ನು ಪಟ್ಟಿ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments