Karnataka

ಮಹಾರಾಜಾ ಯದುವೀರ್ ಒಡೆಯರ್ ಕುಟುಂಬದಿಂದ ಹನುಮಾನ್ ಜನ್ಮ ಸ್ಥಳ ಅಂಜನಾದ್ರಿ ಭೇಟಿ

ಗಂಗಾವತಿ: ಮೈಸೂರಿನ ರಾಜ ವಂಶಸ್ಥ ಮಹಾರಾಜಾ ಯದುವೀರ್ ಒಡೆಯರ್ ಅವರು ತಮ್ಮ ಪತ್ನಿ ತ್ರಿಶಿಕಾ ಕುಮಾರಿ ದೇವಿ ಹಾಗು ತಾಯಿ ಪ್ರಮೋದ ದೇವಿ ಜತೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಹನುಮಂತನ ಜನ್ಮ ಸ್ಥಳ ಅಂಜನಾದ್ರಿ ಕ್ಷೇತ್ರಕ್ಕೆ ಇಂದು ಭೇಟಿ ನೀಡಿದರು.

ಸೋಮವಾರ ಬೆಳಿಗ್ಗೆ ಕುಟುಂಬದೊಂದಿಗೆ ಬಂದ ಯದುವೀರ್ ಒಡೆಯರ್ ಅವರು 540 ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆದು ಬಳಿಕ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಕ್ರೇತ್ರದ ಆಡಳಿತ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

Exit mobile version