HomeKarnatakaಪ್ರವೀಣ್ ಹತ್ಯೆ: ನಿನ್ನೆ ಬಿಜೆಪಿಗಾದ ಡ್ಯಾಮೇಜಿಗೆ ತೇಪೆ ಹಚ್ಚಲು ಬಂದ ಸಿಎಂ ಬೊಮ್ಮಾಯಿ, ಕುಟುಂಬಕ್ಕೆ 25...

ಪ್ರವೀಣ್ ಹತ್ಯೆ: ನಿನ್ನೆ ಬಿಜೆಪಿಗಾದ ಡ್ಯಾಮೇಜಿಗೆ ತೇಪೆ ಹಚ್ಚಲು ಬಂದ ಸಿಎಂ ಬೊಮ್ಮಾಯಿ, ಕುಟುಂಬಕ್ಕೆ 25 ಲಕ್ಷ ರೂ. ಚೆಕ್ ನೀಡಿ ಸಾಂತ್ವಾನ

ಮಂಗಳೂರು: ಮತಾಂಧ ದುಷ್ಕರ್ಮಿಗಳಿಂದ ದಾರುಣವಾಗಿ ಕೊಲೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಅವರ ಮನೆಗೆ ಗುರುವಾರ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆಯ ದಿನ ಸ್ಥಳದಲ್ಲಿ ಬಿಜೆಪಿ ಪಕ್ಷಕ್ಕಾದ ಮುಜುಗರಕ್ಕೆ ತೇಪೆ ಹಚ್ಚುವ ಯತ್ನ ನಡೆಸಿದರು. ಮುಖ್ಯಮಂತ್ರಿಗಳು ಪ್ರವೀಣ್ ಕುಟುಂಬಕ್ಕೆ ಸಾಂತ್ವಾನ ಹೇಳಿ, 25 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು.

ನಿನ್ನೆಯ ದಿನ ಅಂತಿಮ ಯಾತ್ರೆಯ ಸಂದರ್ಭ ಆಕ್ರೋಶಿತ ಕಾರ್ಯಕರ್ತರು ಸತಃಲೀಯ ಸಂಸದ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾರನ್ನು ಅಲುಗಾಡಿಸಿ ಉರುಳಿಸಲು ಯತ್ನಿಸಿದ್ದರು. ಪೊಲೀಸರು ಮಧ್ಯ ಪ್ರವೇಶಿಸದಿದ್ದರೆ ಅಲ್ಲಿಯೇ ಬೆಂಕಿ ಹಚ್ಚಿ ಜೀವಂತ ದಹಿಸುವ ಅಪಾಯವೂ ಇತ್ತು. ಜತೆಗೆ ಸಚಿವರಿಗೆ ಧಿಕ್ಕಾರ ಕೂಗಿದ ಘಟನೆಗಳೂ ನಡೆದಿದ್ದವು. ಹಾಗಾಗಿ ಪಕ್ಷಕ್ಕೆ ಭಾರೀ ಪ್ರಮಾಣದಲ್ಲಿ ಮುಜುಗರ ಉಂಟಾಗಿತ್ತು.

ಬಸವರಾಜ ಬೊಮ್ಮಾಯಿ ಜತೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸುಳ್ಯ ತಾಲೂಕಿನ ನೆಟ್ಟೂರು ಗ್ರಾಮಕ್ಕೆ ಭೇಟಿ ನೀಡಿ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಾಂತ್ವಾನ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments