HomeKarnatakaಬಿಲ್ಲವ ಸಂಪ್ರದಾಯದಂತೆ ಪ್ರವೀಣ್ ನೆಟ್ಟಾರು ಅಂತ್ಯ ಸಂಸ್ಕಾರ: ಎಲ್ಲೆಡೆ ಬಿಜೆಪಿ ಮೇಲೆ ಆಕ್ರೋಶ, ಪಧಾಧಿಕಾರಿಗಳ ರಾಜೀನಾಮೆ...

ಬಿಲ್ಲವ ಸಂಪ್ರದಾಯದಂತೆ ಪ್ರವೀಣ್ ನೆಟ್ಟಾರು ಅಂತ್ಯ ಸಂಸ್ಕಾರ: ಎಲ್ಲೆಡೆ ಬಿಜೆಪಿ ಮೇಲೆ ಆಕ್ರೋಶ, ಪಧಾಧಿಕಾರಿಗಳ ರಾಜೀನಾಮೆ ಪರ್ವ

ಬೆಳ್ಳಾರೆ/ ಸುಳ್ಯ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಸುಳ್ಯದ ಬೆಳ್ಳಾರೆ ನಿವಾಸಿ ಪ್ರವೀಣ್ ನೆಟ್ಟಾರು ಅವರ ಅಂತ್ಯ ಸಂಸ್ಕಾರ ಹುಟ್ಟೂರಲ್ಲಿ ಜರಗಿದ್ದು ಬಿಲ್ಲವ ಸಂಪ್ರದಾಯದಂತೆ ವಿಧಿ ವಿಧಾನ ನಡೆಸಲಾಗಿದೆ. ಮೃತ ಪ್ರವೀಣ್ ಅವರ ತಂದೆ ಬೆಳೆದು ನಿಂತ ಮಗನ ಚಿತೆಗೆ ಬೆಂಕಿ ಇಡುವ ದೃಶ್ಯ ನೋಡುಗರ ಮನ ಕಲಕುವಂತಿತ್ತು.

ಅಂತ್ಯ ಸಂಸ್ಕಾರಕ್ಕೂ ಮೊದಲು ಮೃತರ ಪಾರ್ಥಿವ ಶರೀರವನ್ನು ಪುತ್ತೂರಿನಿಂದ ಬೆಳ್ಳಾರೆಗೆ ಮೆರವಣಿಗೆ ಮೂಲಕ ತರಲಾಯಿತು. ಈ ಸಂದರ್ಭ ಸಾವಿರಾರು ಕಾರ್ಯಕರ್ತರು, ಹಿತೈಷಿಗಳು ನೆರೆದಿದ್ದರು. ಆಕ್ರೋಶಿತ ಕಾರ್ಯಕರ್ತರು ಬಿಜೆಪಿ ಅಧ್ಯಕ್ಷ ಹಾಗು ಸ್ಥಳೀಯ ಸಂಸದ ನಳಿನ್ ಕುಮಾರ್ ಅವರ ಕಾರನ್ನು ಉರುಳಿಸಲು ಯತ್ನಿಸಿದ ಘಟನೆಯೂ ನಡೆಯಿತು. ಸಚಿವ ಸುನಿಲ್ ಕುಮಾರ್ ಹಾಗು ಅನಗರ್ ಅವರಿಗೆ ಧಿಕ್ಕಾರ ಕೂಗಿ ಸಚಿವರು ಪೆಚ್ಚುಮೋರೆ ಹಾಕುವಂತಾಯಿತು.

ಪ್ರವೀಣ್ ಹತ್ಯೆಯ ಬೆನ್ನಲ್ಲೇ ಬಿಜೆಪಿ ಹಾಗು ಅದರದೇ ಸರಕಾರದ ವಿರುದ್ಧ ಮುನಿಸಿಕೊಂಡಿರುವ ಬಿಜೆಪಿ ಕಾರ್ಯಕರ್ತರು, ಸ್ಥಳೀಯ ಮಟ್ಟದ ಪಧಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಲು ಆರಂಭಿಸಿದ್ದು ಇದು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ತಮ್ಮದೇ ಪಕ್ಷದ ಸರಕಾರ ಇದ್ದರೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ, ದುಷ್ಕರ್ಮಿಗಳಿಗೆ ಪೊಲೀಸರ ಹಾಗು ಕಾನೂನಿನ ಭಯ ಇಲ್ಲ ಎಂದ ಮೇಲೆ ನಮಗೆ ಸರಕಾರ ಏಕೆ ಬೇಕು? ವಿರೋಧ ಪಕ್ಷದಲ್ಲೇ ಇರಬಹುದು ಅಲ್ಲವೇ ಎಂದು ಹಲವಾರು ಆಕ್ರೋಶ ವ್ಯಕ್ತಪಡಿಸುತ್ತ ಇದ್ದಾರೆ.

ಇದರ ಬೆನ್ನಲ್ಲೇ ಸಾಧನಾ ಸಮಾವೇಶ ನಡೆಸಲು ಯೋಜಿಸಿದ್ದ ಬಿಜೆಪಿಗೆ ಹಿನ್ನಡೆಯಾಗಿದೆ. ಯಾವ ಮುಖ ಇಟ್ಟುಕೊಂಡು ಸಾಧನ ಸಮಾವೇಶ ನಡೆಸುತ್ತೀರಿ ಎಂದು ಕಾಂಗ್ರೆಸ್ ಬಿಜೆಪಿಯನ್ನು ಕುಟುಕಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments