
ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟ ಸಮೀಪದ ಲಲಿತಾದ್ರಿಪುರ ಹೊರವಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಗಳವಾರ ಸಂಜೆ (ಆಗಸ್ಟ್ 24) ಸಂತ್ರಸ್ಥೆ ತನ್ನ ಗೆಳೆಯನ ಜತೆ ವಿಹಾರಕ್ಕೆ ತೆರಳಿದ್ದ ಸಂಧರ್ಭ ಈ ಘಟನೆ ನಡೆದಿದೆ. ಏಕಾಂತಕ್ಕಾಗಿ ಇಬ್ಬರೂ ಲಲಿತಾದ್ರಿಪುರ ನಿರ್ಜನ ಜಾಗಕ್ಕೆ ಹೋಗಿದ್ದಾರೆ. ಅಲ್ಲಿಗೆ ಬಂಡ 6 ಮಂದಿ ಆಗಂತುಕರು ಯುವತಿಯ ಗೆಳೆಯನಿಗೆ ಹೊಡೆದು ಹಲ್ಲೆ ಮಾಡಿ ಯುವತಿಯನ್ನು ಎಳೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ.
ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.












































