HomeCoastalಅನೋನ್ಯ ಗೆಳತಿಯರಾಗಿದ್ದ ಅವರ ನಡವಳಿಕೆಯು ಸಿಎಫ್ಐ ಸಂಪರ್ಕದ ನಂತರ ಸಂಪೂರ್ಣ ಬದಲಾಯಿತು: ಉಡುಪಿ ಮುಸ್ಲಿಂ ವಿದ್ಯಾರ್ಥಿನಿಯರ...

ಅನೋನ್ಯ ಗೆಳತಿಯರಾಗಿದ್ದ ಅವರ ನಡವಳಿಕೆಯು ಸಿಎಫ್ಐ ಸಂಪರ್ಕದ ನಂತರ ಸಂಪೂರ್ಣ ಬದಲಾಯಿತು: ಉಡುಪಿ ಮುಸ್ಲಿಂ ವಿದ್ಯಾರ್ಥಿನಿಯರ ಸ್ನೇಹಿತೆಯರ ಮಾತು

ಉಡುಪಿ: ಹಿಜಾಬ್ ಧರಿಸಿ ಬಂದು ಪ್ರತಿಭಟನೆ ಆರಂಭಿಸುವಾಗಿನ ಅವರ ನಡವಳಿಕೆಗೂ ಈ ಹಿಂದೆ ನಮ್ಮ ಗೆಳತಿಯರಾಗಿದ್ದಾಗ ಇದ್ದ ನಡವಳಿಕೆಗೂ ಅಜಗಜಾಂತರ ವ್ಯತ್ಯಾಸವಿತ್ತು ಎಂದು ಉಡುಪಿಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರತಿಭಟನಾನಿರತ ಮುಸ್ಲಿಂ ವಿದ್ಯಾರ್ಥಿಗಳ ಹಿಂದೂ ಸ್ನೇಹಿತೆಯರು ಹೇಳಿದ್ದಾರೆ.

ರಾಷ್ಟ್ರೀಯ ಮಾಧ್ಯಮವೊಂದರ ಜತೆ ಮಾತನಾಡಿದ ಆ 6 ಮಂದಿ ಮುಸ್ಲಿಂ ವಿದ್ಯಾರ್ಥಿಗಳ ಹಿಂದೂ ಸ್ನೇಹಿತೆಯರು ಅವರ ನಡವಳಿಕೆ ಬದಲಾವಣೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅದೇ ಕಾಲೇಜಿನ ವಿದ್ಯಾರ್ಥಿನಿ ಯಶಸ್ವಿನಿ ಹೇಳುವಂತೆ ಹಿಂದೆ ಅವರುಗಳು ಕಾಲೇಜಿನ ನಿಯಮದಂತೆಯೇ ಸಮವಸ್ತ್ರ ಧರಿಸುತ್ತಿದ್ದರು. ಹಿಜಾಬ್ ಧರಿಸುತ್ತಿರಲಿಲ್ಲ. ನಮ್ಮ ಗೆಳತಿಯರಾಗಿದ್ದ ಅವರ ಹಿಂದಿನ ನಡವಳಿಕೆಗಳು ಅನೋನ್ಯವಾಗಿದ್ದವು. ಆದರೆ ಮಿಡ್ ಟರ್ಮ್ ಎಕ್ಸಾಮ್ ಮುಗಿದ ಕೂಡಲೇ ಅವರ ವರ್ತನೆ ಬದಲಾಗಿತ್ತು.

“ಮಿಡ್ ಟರ್ಮ್ ಎಕ್ಸಾಮ್ ಮುಗಿದ ಮೇಲೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸಂಪರ್ಕಕ್ಕೆ ಬಂದಿದ್ದ ಅವರುಗಳು ನಂತರ ಕಾಲೇಜಿಗೆ ಹಿಜಾಬ್ ಧರಿಸಿ ಬರಲು ಆರಂಭಿಸಿದರು. ಪ್ರವೇಶ ನಿರಾಕರಿಸಿದಾಗ ಪ್ರತಿಭಟನೆಗೆ ಇಳಿದರು. ಸುಮಾರು 30 ಮಂದಿ ಹಿಜಾಬ್ ಧರಿಸಿ ಬಂದುದರಿಂದಾಗಿ ಕಾಲೇಜಿನಲ್ಲಿನ 600ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ಪ್ರತಿಭಟನೆ ಕೈಬಿಡುವಂತೆ ನಾವು ಅವರಲ್ಲಿ ಕೇಳಿಕೊಂಡೆವು. ಕೇವಲ ಎರಡು ತಿಂಗಳು ಮಾತ್ರ ಉಳಿದಿರುವ ಕಾರಣ ಅದನ್ನು ಕೈಬಿಡುವಂತೆ ನಾವು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದೇವೆ. ಆದರೆ ಅವರು ರಾಜಿ ಮಾಡಿಕೊಳ್ಳಲು ಸಿದ್ಧರಿರಲಿಲ್ಲ. ಅವರು ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ಹಾಗು ನಮ್ಮೊಂದಿಗೆ ಮಾತನಾಡುವ ಅವರ ವರ್ತನೆಯೇ ಬದಲಾಗಿತ್ತು”ಎಂದು ಯಶಸ್ವಿನಿ ಹೇಳಿದರು.

” ಅವರುಗಳು ಏಕಾಂಗಿಯಾಗಿದ್ದಾಗ ಸಾಮಾನ್ಯವಾಗಿ ಮಾತನಾಡುತ್ತಾರೆ. ಆದರೆ ಸಿಎಫ್ಐ (ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ) ಸದಸ್ಯರು ಹಾಜರಿದ್ದಾಗ, ಈ ಹುಡುಗಿಯರ ಮಾತನಾಡುವ ಶೈಲಿಯು ಬದಲಾಗುತ್ತದೆ. ಅವರು ನೋಡುವ ನೋಟ ಕೂಡ ಬದಲಾಗುತ್ತದೆ. ಆ ಸಮಯದಲ್ಲಿ ಅವರು ನಮ್ಮನ್ನು ನಿರ್ಲಕ್ಷಿಸುತ್ತಾರೆ ಮತ್ತು ಉದ್ಧಟತನದಿಂದ ಮಾತನಾಡುತ್ತಾರೆ. ನಾವು ಆತ್ಮೀಯ ಸ್ನೇಹಿತರಾಗಿದ್ದೆವು. ಆದರೆ ಪ್ರತಿಭಟನೆ ಪ್ರಾರಂಭವಾದ ನಂತರ ಅವರು ನಮ್ಮಿಂದ ದೂರವಾಗಲು ಪ್ರಾರಂಭಿಸಿದರು”ಎಂದು ಆ ಮುಸ್ಲಿಂ ವಿದ್ಯಾರ್ಥಿನಿಯರ ಸ್ನೇಹಿತೆ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments