
ಬೆಂಗಳೂರು: ಐಪಿಎಸ್ ಅಧಿಕಾರಿ ಸಿಐಡಿ ಎಸ್ಪಿ ಆಗಿರುವ ರವಿ ಚನ್ನಣ್ಣನವರ್ ಸೇರಿದಂತೆ ಒಟ್ಟು ೯ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ರವಿ ಚನ್ನಣ್ಣನವರ್ ಸಿಐಡಿಯಿಂದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಮತ್ತೋರ್ವ ಸಿಐಡಿ ಎಸ್ಪಿ ಭೀಮಾಶಂಕರ್ ಗುಳೇದ್ ಅವರನ್ನು ಬೆಂಗಳೂರು ಪೂರ್ವ ವಲಯದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಕೊಪ್ಪಳದ ಎಸ್ಪಿ ಶ್ರೀಧರ್ ಟಿ ಅವರನ್ನು ಡಿ.ಸಿ.ಆರ್.ಇ ಎಸ್ಪಿಯಾಗಿ, ಎಸಿಬಿ ಎಸ್ಪಿ ಅಬ್ದುಲ್ ಅಹದ್ ಕೆಎಸ್ಆರ್ಟಿಸಿ ಭದ್ರತಾ ಹಾಗು ವಿಚಕ್ಷಣ ದಳದ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.
ಚಾಮರಾಜನಗರ ಎಸ್ಪಿ ದಿವ್ಯ ಸಾರ ಥಾಮಸ್ ಅವರನ್ನು ಮೈಸೂರಿನ ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕರಾಗಿ ನೇಮಕಗೊಳಿಸಲಾಗಿದೆ. ದಿವ್ಯ ಅವರ ಜಾಗಕ್ಕೆ ಕಾರಾಗೃಹ ಇಲಾಖೆ ಎಸ್ಪಿ ಟಿಪಿ ಶಿವಕುಮಾರ್ ಅವರನ್ನು ವರ್ಗಾಯಿಸಲಾಗಿದೆ. ಬೀದರ್ ಎಸ್ಪಿ ನಾಗೇಶ್ ಡಿಎಲ್ ಅವರನ್ನು ಬೆಂಗಳೂರು ಸಿಐಡಿ ಎಸ್ಪಿಯಾಗಿ ಹಾಗು ಬೀದರ್ ಎಸ್ಪಿ ಜಾಗಕ್ಕೆ ಡೆಕ್ಕ ಸುರೇಶ ಬಾಬು ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.