HomeKarnatakaಸಿಂಹ ಬಾಯಿ ಮುಚ್ಕೊಂಡಿರಬೇಕು; ಸಂಸದ ಮುನಿಸ್ವಾಮಿ ಚೈಲ್ಡ್ ಆರ್ಟಿಸ್ಟ್: ಬಾಯಿ ಉದ್ದ ಬಿಟ್ಟ ಶಾಸಕ ಪ್ರದೀಪ್...

ಸಿಂಹ ಬಾಯಿ ಮುಚ್ಕೊಂಡಿರಬೇಕು; ಸಂಸದ ಮುನಿಸ್ವಾಮಿ ಚೈಲ್ಡ್ ಆರ್ಟಿಸ್ಟ್: ಬಾಯಿ ಉದ್ದ ಬಿಟ್ಟ ಶಾಸಕ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: ಕಾಂಗ್ರೆಸ್ ನೀಡಿದ ಗ್ಯಾರಂಟಿ ಅನ್ನ ಭಾಗ್ಯ ಅಕ್ಕಿ ವಿಚಾರವಾಗಿ ಬಿಜೆಪಿ ಕಾಂಗ್ರೆಸ್​ ನಾಯಕರ ನಡುವೆ ಮಾತಿನ ಜಟಾಪಟಿ ಮುಂದುವರಿದಿದೆ. ಇದೀಗ ಕೋಲಾರ ಸಂಸದ ಮುನಿಸ್ವಾಮಿ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನಡುವೆ ಫೈಟ್ ನಡೆದಿದೆ.

ಸಂಸದ ಮುನಿಸ್ವಾಮಿ ಮಾತನಾಡಿ, “ಇಲ್ಲಿ ಯಾರೋ ಒಬ್ಬ ಚಿಕ್ಕಬಳ್ಳಾಪುರಕ್ಕೆ ಬಂದಿದ್ದಾನೆ. ಬೆಳಗ್ಗೆಯಿಂದ ಸಂಜೆವರೆಗೂ ಅಪ್ಪ-ಅಮ್ಮ ಅಂತಿದ್ದಾನೆ. ಈ ಥರದವರನ್ನು ನಾನ್ ನೋಡಿಲ್ಲ, ಅಬ್ಬಬ್ಬಾ ಏನ್ ಡ್ರಾಮಾ. ಮುಂದಿದೆ ಮಾರಿ ಹಬ್ಬ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಮುನಿಸ್ವಾಮಿ ಅವರಿಗೆ ತಿರುಗೇಟು ನೀಡಿದ ಪ್ರದೀಪ್ ಈಶ್ವರ್, “ಅವರ್ಯಾರೋ ಮನಿಸ್ವಾಮಿ ಅಂತೆ. ಅವ್ರ ಹೆಸರು ಕೋಲಾರದವರಿಗೆ ಗೊತ್ತಿಲ್ಲ, ಅವರೊಂಥರಾ ಚೈಲ್ಡ್ ಆರ್ಟಿಸ್ಟ್, ಒಬ್ಬ ಎಂಪಿ ಹೇಗೆ ಇರಬೇಕು ಎಂಬುದು ಅವರಿಗೆ ತಿಳಿದಿಲ್ಲ, ಮುಂದಿದೆ ಮಾರಿಹಬ್ಬ ಅಂತಾ ನನಗೆ ಹೇಳ್ತಿದ್ದಾರೆ. ಮುನಿಶಾಮಣ್ಣ ನನಗೆ ಐದು ವರ್ಷಕ್ಕೆ ಇದೆ ಪಂಡಗಾ. ನಿಮಗೆ ಮುಂದಿನ ವರ್ಷವೇ ಇದೆ, ನಾವು ಬರ್ತೀವಿ” ಎಂದು ಚಾಲೆಂಜ್ ಮಾಡಿದ್ದಾರೆ.

ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧವೂ ಏರಿ ಹೋದ ಶಾಸಕ ಪ್ರದೀಪ್ ಈಶ್ವರ್, “ನಾನೇನೋ ಹೊಸ ಶಾಸಕ. ಮೊದಲ ಬಾರಿ ಗೆದ್ದಿದ್ದೇನೆ. ನೀವು ಸಂಸದರಾಗಿ ಒಂಬತ್ತು ವರ್ಷ ಆಯ್ತಲ್ವಾ? ನಿಮಗಿನ್ನೂ ಸರಿಯಾಗಿ ಯಾರೂ ಮಾತು ಕಲಿಸಿಲ್ವಲ್ವ? ಎಂದು ಸಿಂಹ ಈ ಹಿಂದೆ ನೀಡಿದ್ದ ಹೇಳಿಕೆ ಕೌಂಟರ್ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments