Karnataka

ಜನತೆಗೆ ಬೆಲೆ ಏರಿಕೆ ಸಂಕಷ್ಟ: ಹೊಸ ಎಲ್ ಪಿಜಿ ಸಂಪರ್ಕ ಇನ್ನು ತುಂಬಾ ದುಬಾರಿ

ನವದೆಹಲಿ: ಸತತವಾಗಿ ಎಲ್ ಪಿಜಿ ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನತೆ ಈಗ ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಹೊಸ ಎಲ್‌ಪಿಜಿ ಸಂಪರ್ಕಗಳಿಗೆ ನೀಡುವ ಒಂದು ಬಾರಿಯ ಭದ್ರತಾ ಠೇವಣಿಯ ಮೊತ್ತವನ್ನು ಹೆಚ್ಚಿಸಿದ್ದು, ಹೊಸ ಗ್ರಾಹಕರು ಜೂನ್ 16 ರಿಂದ ಭದ್ರತಾ ಠೇವಣಿಯಲ್ಲಿ ಹೆಚ್ಚುವರಿಯಾಗಿ 750 ರೂ. ನೀಡಬೇಕಾಗುತ್ತದೆ.

ಭದ್ರತಾ ಠೇವಣಿ ಮೊತ್ತವನ್ನು ಪ್ರತಿ ಸಿಲಿಂಡರ್‌ಗೆ 1,450 ರೂ.ನಿಂದ 2,200 ರೂ.ಗೆ ಏರಿಕೆ ಮಾಡಲಾಗಿದ್ದು, ರೆಗುಲೇಟರ್ ಬೆಲೆ ಈಗಿನ 150 ರೂ.ನಿಂದ 250 ರೂ.ಗೆ ಹೆಚ್ಚಳವಾಗಿದೆ. ಈ ಹಿಂದೆ ಹೊಸ ಗ್ಯಾಸ್ ಸಂಪರ್ಕ ಪಡೆಯಲು ಬೆಲೆ 1450 ರೂ. ನೀಡಬೇಕಾಗಿತ್ತು. ಈಗ ಹೊಸ ಗ್ಯಾಸ್ ಸಂಪರ್ಕ ಪಡೆಯಲು ಎರಡು ಸಿಲಿಂಡರ್‌ಗಳಿಗೆ ಭದ್ರತಾ ಠೇವಣಿಯಾಗಿ 4,400 ರೂ. ನೀಡಬೇಕಾಗುತ್ತದೆ.

Exit mobile version