
ಶಿವಮೊಗ್ಗ: ದೇಶ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದರೆ ಶಿವಮೊಗ್ಗದಲ್ಲಿ ಟಿಪ್ಪು ಸುಲ್ತಾನ್ ಸಂಘಟನೆ ಸೇರಿದ ಹರಾಮಿ ಕಾರ್ಯಕರ್ತರು ಅಮೀರ್ ಅಹ್ಮದ್ ವೃತ್ತದಲ್ಲಿ ಅಳವಡಿಸಿದ್ದ ಸ್ವಾತಂತ್ರ ಹೋರಾಟಗಾರ ವೀರ್ ಸಾವರ್ಕರ್ ಫ್ಲೆಕ್ಸ್ ಅನ್ನು ಪೊಲೀಸರ ಮುಂದೆಯೇ ಕಿತ್ತು ಹಾಕಿದ್ದು ಘಟನೆ ಬಳಿಕ ಇಬ್ಬರು ಹಿಂದೂ ಕಾರ್ಯಕರ್ತರಿಗೆ ಚೂರಿಯಿಂದ ಇರಿಯಲಾಗಿದೆ.
ಫ್ಲೆಕ್ಸ್ ಅನ್ನು ಕಿತ್ತೆಸೆದು ಗಲಾಟೆ ಮಾಡಿದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಸಾವರ್ಕರ್ ಫ್ಲೆಕ್ಸ್ ತೆರವು ಖಂಡಿಸಿ ಹಿಂದೂ ಪರ ಸಂಘಟನೆಗಳು ಸ್ಥಳದಲ್ಲಿ ಧರಣಿ ನಡೆಸಿದ್ದು ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.
ಈ ಘಟನೆ ಬಳಿಕ ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ಇದ್ದು ಫ್ಲೆಕ್ಸ್ ಕಿತ್ತ ಬಳಿಕ ಎರಡು ಗಂಟೆ ಅವಧಿಯಲ್ಲಿ ಇಬ್ಬರಿಗೆ ಮತಾಂಧರು ಚೂರಿ ಇರಿದಿದ್ದಾರೆ. ಉಪ್ಪಾರಕೇರಿ ಬಡಾವಣೆಯಲ್ಲಿ ಪ್ರೇಮ್ ಸಿಂಗ್ ಎಂಬಾತನಿಗೆ ಹಾಗೂ ಅಶೋಕ ನಗರದಲ್ಲಿ ಪ್ರವೀಣ್ ಎಂಬುವರಿಗೆ ಚೂರಿ ಇರಿಯಲಾಗಿದೆ. ರಾಜ್ಯ ಗೃಹ ಸಚಿವರ ಜಿಲ್ಲೆಯಲ್ಲೇ ಕಾನೂನು ಸ್ಥಿತಿ ಹದಗೆಟ್ಟಿದ್ದು ರಾಷ್ಟ್ರಭಕ್ತರಿಗೆ ರಕ್ಷಣೆಯಿಲ್ಲದಂತಾಗಿದೆ. ಮತಾಂಧ ಹರಾಮಿ ದೇಶ ದ್ರೋಹಿಗಳ ಹಾರಾಟ ಹೆಚ್ಚಾಗುತ್ತಿದ್ದು ರಾಜ್ಯ ಸರಕಾರ ಇನ್ನೂ ಬಾಯಿ ಮಾತಿನ “ಕಠಿಣ” ಕ್ರಮದಲ್ಲೇ ಕಾಲ ಕಳೆಯುತ್ತಿದ್ದು ಜನಾಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಘಟನೆ ಬಳಿಕ ಶಿವಮೊಗ್ಗದಲ್ಲಿ ಮುಂದಿನ 3 ದಿನ ಸೆಕ್ಷನ್ 144 ಜಾರಿ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮೀ ಪ್ರಾಸದ್ ಭೇಟಿ ನೀಡಿ ಪರಿಶೆಲನೆ ಮಾಡಿದ್ದಾರೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL












































