HomeKarnatakaಕಾಶ್ಮೀರದಲ್ಲಿ ಜೈಶ್-ಎ-ಮೊಹಮ್ಮದ್‌ನ 10 ಸಹಚರರ ಬಂಧನ

ಕಾಶ್ಮೀರದಲ್ಲಿ ಜೈಶ್-ಎ-ಮೊಹಮ್ಮದ್‌ನ 10 ಸಹಚರರ ಬಂಧನ

ಜಮ್ಮು: ಪ್ರಮುಖ ಬೆಳವಣಿಗೆಯಲ್ಲಿ ನಿಷೇಧಿತ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಹತ್ತು ಮಂದಿ ಸಹಚರರನ್ನು ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ಬುಧವಾರ ಬಂಧಿಸಿದೆ. ಎಸ್‌ಐಎ ಅಧಿಕಾರಿಗಳು ಕಾಶ್ಮೀರದ ದಕ್ಷಿಣ ಮತ್ತು ಮಧ್ಯ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ರಾತ್ರಿ ಕಾರ್ಯಾಚರಣೆ ನಡೆಸಿ ಉಗ್ರಗಾಮಿಗಳನ್ನು ಬಂಧಿಸಿದೆ.

ಬಂಧಿತರು ಜೆಎಂನ ಸ್ಲೀಪರ್ ಸೆಲ್’ಗಳಾಗಿ ಕೆಲಸ ಮಾಡುತ್ತಿದ್ದರು. ಎಲ್ಲ 10 ಮಂದಿಯೂ ಜೆಎಂ ಭಯೋತ್ಪಾದಕ ಕಮಾಂಡರ್‌ಗಳಿಂದ ನೇರವಾಗಿ ಸೂಚನೆಗಳನ್ನು ಪಡೆಯುತ್ತಿದ್ದರು. ಅವರಿಗೆ ಪರಸ್ಪರರ ಚಟುವಟಿಕೆಗಳ ಬಗ್ಗೆ ತಿಳಿದಿರಲಿಲ್ಲ. ಅಷ್ಟರ ಮಟ್ಟಿಗೆ ಗೌಪ್ಯತೆ ಕಾಯ್ದುಕೊಳ್ಳಲಾಗಿತ್ತು.

ಬಂಧಿತರು ಉಗ್ರ ಚಟುವಟಿಕೆಗಳಿಗೆ ಯುವಕರ ನೇಮಕಾತಿ, ಹಣಕಾಸು ವ್ಯವಸ್ಥೆ ಮತ್ತು ದಕ್ಷಿಣ ಮತ್ತು ಮಧ್ಯ ಕಾಶ್ಮೀರದಲ್ಲಿ ಶಸ್ತ್ರಾಸ್ತ್ರಗಳನ್ನು ಸಾಗಿಸುವಲ್ಲಿ ಸಕ್ರಿಯರಾಗಿದ್ದರು. ದಾಳಿಯ ಸಮಯದಲ್ಲಿ ಮೊಬೈಲ್ ಫೋನ್‌ಗಳು, ಸಿಮ್ ಕಾರ್ಡ್‌ಗಳು, ಬ್ಯಾಂಕಿಂಗ್ ಬಳಕೆಯ ದಾಖಲೆಗಳು ಮತ್ತು ನಕಲಿ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments