
ಗಂಡು ಹೆಣ್ಣು ಸೆಕ್ಸ್ ಮಾಡುವಾಗ ಪುರುಷರೇ ಪ್ರಾಮುಖ್ಯರಾಗಿರುತ್ತಾರೆ. ಸೆಕ್ಸ್ ನ ಸಮಯ, ಹೆಣ್ಣನ್ನು ತೃಪ್ತಿ ಪಡಿಸುವುದು, ಸ್ಖಲನದ ಅವಧಿ ಹೀಗೆ ಪುರುಷರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದರೆ ಕೆಲವೊಮ್ಮೆ ಪುರುಷರಿಗೆ ಸಂಗಾತಿಯ ಮುಂದೆ ತಮ್ಮ ಪುರುಷತ್ವ ಸಾಬೀತಾಗುವುದಿಲ್ಲ ಎನ್ನುವ ಭಯ ಇರುತ್ತದೆ. ಹೆಚ್ಚಿನವರಿಗೆ ಹೇಳಿಕೊಳ್ಳಲಾಗದಂತಹ ಸಮಸ್ಯೆಗಳು ಇರುತ್ತವೆ. ಅವುಗಳಲ್ಲಿ ಶೀಘ್ರ ಸ್ಖಲನ ಸಮಸ್ಯೆ ಸಹ ಒಂದು.
ಈ ಸಮಸ್ಯೆಯ ಬಗೆಗಿನ ಯೋಚನೆ ಮಾಡಿ ಮಾಡಿ ಪುರುಷರು ಸೆಕ್ಸ್ ಬಗೆಗಿನ ಉತ್ಸಾಹವನ್ನೇ ಕಳೆದುಕೊಂಡು ಬಿಡುತ್ತಾರೆ. ಈ ಸಮಸ್ಯೆಯಿಂದ ಹೊರ ಬರಲು ಇಲ್ಲಿವೆ ಕೆಲವು ಆಯುರ್ವೇದ ಮೂಲದ ಮನೆ ಮದ್ದುಗಳು.
ಜೇನು ತುಪ್ಪ ಮತ್ತು ಶುಂಠಿ:
ಶುಂಠಿ ಶಿಶ್ನದ ಭಾಗಕ್ಕೆ ಹೆಚ್ಚಿನ ರಕ್ತ ಸಂಚಾರ ಉಂಟಾಗುವ ಹಾಗೆ ಮಾಡುತ್ತದೆ. ಹಾಗು ಲೈಂಗಿಕ ಸಮಸ್ಯೆಗಳಿಗೂ ಕೂಡ ಪರಿಹಾರ ಒದಗಿಸುತ್ತದೆ. ಅರ್ಧ ಟೀ ಚಮಚ ಶುಂಠಿ ಮತ್ತು ಜೇನುತುಪ್ಪವನ್ನು ನೀವು ಮಲಗುವ ಮುಂಚೆ ತೆಗೆದುಕೊಂಡರೆ ನೀವು ಕುದುರೆಯಂತೆ ಆಗಬಹುದು.
ಬೆಳ್ಳುಳ್ಳಿ:
ಶಿಶ್ನದ ಭಾಗಕ್ಕೆ ನೇರವಾಗಿ ರಕ್ತ ಸಂಚಾರ ಹೆಚ್ಚಿಸುವಲ್ಲಿ ಬೆಳ್ಳುಳ್ಳಿ ಪಾತ್ರ ತುಂಬಾ ದೊಡ್ಡದು. ಮತ್ತು ನಮ್ಮ ದೇಹವನ್ನು ಬಿಸಿಯಾಗಿ ಇರುವಂತೆ ಇದು ಮಾಡುತ್ತದೆ. ಕೆಲವು ಬೆಳ್ಳುಳ್ಳಿ ಚೂರುಗಳನ್ನು ತೆಗೆದು ಕೊಂಡು ಹಸುವಿನ ತುಪ್ಪದಲ್ಲಿ ಬಂಗಾರದ ಬಣ್ಣ ಬರುವವರೆಗೆ ಬಿಸಿ ಮಾಡಿ ಸೇವಿಸಬೇಕು. ಪ್ರತಿದಿನ ಹೀಗೆ ಮಾಡುತ್ತಾ ಬಂದರೆ ಶೀಘ್ರ ಸ್ಖಲನ ದೂರವಾಗುತ್ತದೆ.
ಹಸಿರು ಈರುಳ್ಳಿ ಬೀಜಗಳು:
ಪುರುಷರ ಶೀಘ್ರ ಸ್ಖಲನ ಸಮಸ್ಯೆಗೆ ನೀರಿನಲ್ಲಿ ಹಸಿರು ಈರುಳ್ಳಿ ಬೀಜಗಳನ್ನು ಮಿಶ್ರಣ ಮಾಡಿ ಕುಡಿಯಬೇಕು. ದಿನದಲ್ಲಿ ಮೂರು ಬಾರಿ ಊಟಕ್ಕೆ ಮುಂಚೆ ಇವುಗಳನ್ನು ಸೇವಿಸಬೇಕು. ಲೈಂಗಿಕ ಹುರುಪು ಹೆಚ್ಚಿಸಿಕೊಳ್ಳಲು ಪುರುಷರು ಬಿಳಿ ಈರುಳ್ಳಿ ಕೂಡ ತಿನ್ನಬಹುದು.
ಅಶ್ವಗಂಧ:
ಪುರುಷರ ಹಲವಾರು ಲೈಂಗಿಕ ಸಮಸ್ಯೆಗಳಿಗೆ ಅಶ್ವಗಂಧ ಪರಿಹಾರವನ್ನು ಒದಗಿಸುತ್ತದೆ. ಶೀಘ್ರ ಸ್ಖಲನ ಸಮಸ್ಯೆಗೆ ಇದು ಪರಿಣಾಮಕಾರಿ. ಆಯುರ್ವೇದ ವೈದ್ಯರು ಹೇಳಿದ ಪ್ರಮಾಣದಲ್ಲಿ ಸೇವಿಸುವುದರಿಂದ ಅತ್ಯುತ್ತಮ ಲೈಂಗಿಕ ಆರೋಗ್ಯ ಪಡೆಯಬಹುದು.
ಕೋಳಿ ಮೊಟ್ಟೆ, ಕ್ಯಾರೆಟ್, ಜೇನುತುಪ್ಪ:
ಅರ್ಧ ಬೇಯಿಸಿದ ಮೊಟ್ಟೆ, ಸ್ವಲ್ಪ ತುರಿದ ಕ್ಯಾರೆಟ್ ಮತ್ತು ಇದಕ್ಕೆ ಎರಡು ಟೀ ಚಮಚ ಜೇನುತುಪ್ಪ ಮಿಶ್ರಣ ಮಾಡಿ ಸೇವಿಸುವುದರಿಂದ ಶೀಘ್ರ ಸ್ಕಲನ ಸಮಸ್ಯೆ ಪರಿಹಾರಕ್ಕೆ ಉತ್ತಮ ಪರಿಹಾರ ಲಭಿಸುತ್ತದೆ. ಇದನ್ನು ಕನಿಷ್ಠ ಮೂರು ತಿಂಗಳುಗಳ ಕಾಲ ಮಾಡಬೇಕು.












































