HomeMovieಕಾಂತಾರ ಸಕ್ಸಸ್: ಪಂಜುರ್ಲಿ ದೈವಕ್ಕೆ ಕೋಲ ನೀಡುವ ಮೂಲಕ ಹರಕೆ ಸಲ್ಲಿಸಿದ ಚಿತ್ರ ತಂಡ

ಕಾಂತಾರ ಸಕ್ಸಸ್: ಪಂಜುರ್ಲಿ ದೈವಕ್ಕೆ ಕೋಲ ನೀಡುವ ಮೂಲಕ ಹರಕೆ ಸಲ್ಲಿಸಿದ ಚಿತ್ರ ತಂಡ

ಕಾಂತಾರ ಚಿತ್ರದ ಸಕ್ಸಸ್ ಬಳಿಕ ಇದೀಗ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್, ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ತಂಡ ಕರಾವಳಿಯ ಆರಾಧ್ಯ ದೈವಗಳಲ್ಲಿ ಒಂದಾದ ಪಂಜುರ್ಲಿಗೆ ಕೋಲ ನೀಡುವ ಮೂಲಕ ಹರಕೆ ಸಲ್ಲಿಸಿದೆ. ಹರಕೆ ಸಲ್ಲಿಕೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ. ಈ ವಿಡಿಯೋಗೆ ವರಾಹ ರೂಪಂ ಹಾಡನ್ನು ಬಳಸಲಾಗಿದ್ದು ಬಹಳ ಅದ್ಭುತವಾಗಿ ಮೂಡಿಬಂದಿದೆ.

ತುಳುನಾಡಿನ ದೈವದ ಕುರಿತಾದ ‘ಕಾಂತಾರ’ ಚಿತ್ರ ಸೂಪರ್ ಡೂಪರ್ ಹಿಟ್ ಆಗಿದ್ದು ವಿಶ್ವದೆಲ್ಲೆಡೆ ಚಿತ್ರ ಪ್ರದರ್ಶನಗೊಂಡು ದಾಖಲೆ ಮೇಲೆ ದಾಖಲೆ ಮಾಡಿದೆ. ಚಿತ್ರ ತಂಡದ ಹರಕೆಯ ಪಂಜುರ್ಲಿ ಕೋಲದಲ್ಲಿ ರಿಷಬ್ ಶೆಟ್ಟಿ ಕುಟುಂಬ, ನಿರ್ಮಾಪಕ ವಿಜಯ್ ಕಿರಂಗದೂರ್, ನಟಿ ಸಪ್ತಮಿ ಗೌಡ ಸೇರಿದಂತೆ ಚಿತ್ರ ತಂಡದ ಹಲವರು ಭಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments