
ಬೆಂಗಳೂರು: ನಟನೆ ಬಿಟ್ಟು ಹೆಣ್ಣುಮಕ್ಕಳನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ ಶುರು ಮಾಡಿದ ಸ್ಯಾಂಡಲ್ವುಡ್ ನಟನನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಡೇಟಿಂಗ್ ಆ್ಯಪ್ ಆದ ಲೊಕ್ಯಾಂಟೋ ಆ್ಯಪ್ ನಲ್ಲಿ ಹುಡುಗಿಯರ ಫೋಟೋಗಳನ್ನು ಬಳಸಿಕೊಂಡು ನಕಲಿ ಪ್ರೊಫೈಲ್ ಬಳಸಿ ದಂಧೆ ಮಾಡುತ್ತಿದ್ದ ನಟನನ್ನು ಪೊಲೀಸರು ಬಂಧಿಸಿದ್ದಾರೆ. ಕನ್ನಡ ಸಿನೆಮಾದಲ್ಲಿ ಹೀರೋ ಆಗಿ ನಟಿಸಿದ್ದ ಸಂಜು ಅಲಿಯಾಸ್ ಮಂಜುನಾಥ್ ಮಾಂಸ ದಂಧೆಯಲ್ಲಿ ಪ್ರಮುಖ ಆರೋಪಿಯಾಗಿದ್ದು ಇದೀಗ ಅರೆಸ್ಟ್ ಆಗಿದ್ದಾನೆ.
ಯುವ ಎಂದು ಹೆಸರಿಟ್ಟುಕೊಂಡು ಚಿತ್ರರಂಗಕ್ಕೆ ಪ್ರವೇಶ ನೀಡಿದ್ದ ಮಂಜುನಾಥ್ ಕನ್ನಡದಲ್ಲಿ ಸೈಕೋಲಾಜಿ ವಿಷಯಾಧಾರಿತ “ನ್ಯೂರಾನ್” ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದಾನೆ. ಈ ಸಿನಿಮಾ 2019ರಲ್ಲಿ ಬಿಡುಗಡೆಯಾಗಿತ್ತು.
ಈತ ಲೊಕ್ಯಾಂಟೋದಲ್ಲಿ ಹುಡುಗಿಯರ ಫೋಟೋ ಬಳಸಿ ಗ್ರಾಹಕರನ್ನ ಸೆಳೆದು ಸುಲಿಗೆ ಮಾಡುವುದನ್ನೇ ಫುಲ್ ಟೈಂ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಚಿತ್ರನಟ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.












































