HomeMovieಸೋಲಿನ ಸುಳಿಯಲ್ಲಿ ಚಿರಂಜೀವಿ "ಆಚಾರ್ಯ": ನಷ್ಟ ಭರಿಸುವಂತೆ ವಿತರಕರಿಂದ ಒತ್ತಾಯ

ಸೋಲಿನ ಸುಳಿಯಲ್ಲಿ ಚಿರಂಜೀವಿ “ಆಚಾರ್ಯ”: ನಷ್ಟ ಭರಿಸುವಂತೆ ವಿತರಕರಿಂದ ಒತ್ತಾಯ

ಮೆಗಾಸ್ಟಾರ್ ಚಿರಂಜೀವಿ ಮತ್ತು ಅವರ ಪುತ್ರ ರಾಮ್ ಚರಣ್ ಅಭಿನಯದ ‘ಆಚಾರ್ಯ’ ಬಿಡುಗಡೆಯಾಗಿ ಒಂದು ವಾರ ಕಳೆದಿದ್ದು ಗಲ್ಲಾಪೆಟ್ಟಿಗೆಯಲ್ಲಿ ಗಳಿಕೆ ಕಾಣದೆ ನಷ್ಟದತ್ತ ಸಾಗುತ್ತಿದೆ. ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ಪಡೆದಿದ್ದು ಚಿತ್ರವು ಬಾಕ್ಸ್ ಆಫೀಸ್ ಕಲೆಕ್ಷನ್ ಅಲ್ಲಿ ಹಿಂದೆ ಬೀಳಲು ಕಾರಣವಾಗಿದೆ. ಈಗ ಆಗಿರುವ ನಷ್ಟವನ್ನು ಭರಿಸುವಂತೆ ಸಿನೆಮಾದ ವಿತರಕರು ಆಚಾರ್ಯ ಚಿತ್ರ ನಿರ್ಮಾಪಕರಿಗೆ ಒತ್ತಾಯಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ ಹಿಟ್ ಚಿತ್ರಗಳನ್ನು ಕೊಟ್ಟಿದ್ದ ನಿರ್ದೇಶಕ ಕೊರಟಾಲ ಶಿವ ಅವರ ಆಚಾರ್ಯ ಚಿತ್ರ ಬಿಡುಗಡೆಗೂ ಮುನ್ನವೇ ಸಾಕಷ್ಟು ಪ್ರಚಾರ ಪಡೆದಿತ್ತು. ಇದು ತಂದೆ-ಮಗ ಚಿರಂಜೀವಿ ಮತ್ತು ರಾಮ್ ಚರಣ್ ಜೋಡಿಯನ್ನು ಮೊದಲ ಬಾರಿಗೆ ಒಟ್ಟಿಗೆ ತಂದಿತು. ಏಪ್ರಿಲ್ 29 ರಂದು ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಎದ್ದು ನಿಲ್ಲಲು ತೀವ್ರವಾಗಿ ಹೆಣಗಾಡುತ್ತಿದೆ.

ಇದೀಗ ಆಚಾರ್ಯ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ನಿಗದಿತ ದಿನಾಂಕಕ್ಕೋ ಮೊದಲೇ ತೆರೆ ಕಾಣಲಿದೆ. ಈ ಮೂಲಕ ಹೆಚ್ಚುವರಿ ಹಣವನ್ನು ಪಡೆದು ಅದರಲ್ಲಿ ವಿತರಕರ ನಷ್ಟವನ್ನು ತುಂಬಲು ನಿರ್ಮಾಪಕರು ಯೋಜಿಸಿದ್ದಾರೆ ಎನ್ನಲಾಗಿದೆ. ಇದೇ ತಿಂಗಳ 20 ರಂದು ಅಮೆಜಾನ್‌ನಲ್ಲಿ ಪ್ರೈಮ್ ನಲ್ಲಿ ಆಚಾರ್ಯ ಚಿತ್ರ ಬಿಡುಗಡೆಗೊಳ್ಳಲಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments