HomeMovieಜಬರ್ದಸ್ತ್ ಕಾಮಿಡಿ ಸಿನೆಮಾ “ಅಬ್ಬಬ್ಬ” ಜುಲೈ ಒಂದರಂದು ಥಿಯೇಟರಿಗೆ ಲಗ್ಗೆ

ಜಬರ್ದಸ್ತ್ ಕಾಮಿಡಿ ಸಿನೆಮಾ “ಅಬ್ಬಬ್ಬ” ಜುಲೈ ಒಂದರಂದು ಥಿಯೇಟರಿಗೆ ಲಗ್ಗೆ

ಆ ದಿನಗಳು, ಆಟಗಾರ, ಆಕೆ ಮುಂತಾದ ಹಿಟ್ ಚಿತ್ರಗಳ ನಿರ್ದೇಶಕ ಕೆ.ಎಂ.ಚೈತನ್ಯ ಈ ಬಾರಿ ಥ್ರಿಲ್ಲರ್ ಜಾನರ್’ನಿಂದ ಹೊರ ಬಂದು ಔಟ್ ಅಂಡ್ ಔಟ್ ಕಾಮಿಡಿ ಸಬ್ಜೆಕ್ಟ್ ಜತೆಗೆ ಬಂದಿದ್ದಾರೆ. ಅವರ ನಿರ್ದೇಶನದ ಸಂಪೂರ್ಣ ಹಾಸ್ಯಮಯ ಚಿತ್ರ “ಅಬ್ಬಬ್ಬ” ಇದೇ ಜುಲೈ 1 ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಲಿಖಿತ್ ಶೆಟ್ಟಿ ಹಾಗೂ ಅಮೃತ ಅಯ್ಯಂಗಾರ್ ಚಿತ್ರದ ನಾಯಕ ನಾಯಕಿಯಾಗಿ ನಟಿಸಿದ್ದು, ಇವರಿಗೆ ಅಜಯ್ ರಾಜ್, ತಾಂಡವ್ ರಾಮ್, ಧನರಾಜ್ ಆಚಾರ್ ಮುಂತಾದವರು ಸಾಥ್ ನೀಡಿದ್ದಾರೆ. ಮಂಗಳೂರಿನ ಪ್ರತಿಭೆ, ತನ್ನ ಕಾಮಿಡಿ ಸ್ಕಿಟ್’ಗಳಿಂದಾಗಿ ಕರಾವಳಿಯಾದ್ಯಂತ ಜನಪ್ರಿಯರಾಗಿರುವ ಧನರಾಜ್ ಆಚಾರ್ ಅವರಿಗೆ ಇದು ಮೊದಲ ಕನ್ನಡ ಸಿನೆಮಾ.

ಆನ್ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ನಿರ್ಮಾಣ ಜವಾಬ್ದಾರಿ ಹೊತ್ತಿದ್ದು, ಮನೋಹರ್ ಜೋಶಿ ಅವರ ಛಾಯಾಗ್ರಹಣ, ದೀಪಕ್ ಅಲೆಕ್ಸಾಂಡರ್ ಅವರ ಸಂಗೀತ ಹಾಗು ಹರಿದಾಸ್ ಕೆ.ಜಿ.ಎಫ್ ಅವರ ಸಂಕಲನ ಈ ಚಿತ್ರಕ್ಕಿದೆ. ಸಹ ನಿರ್ದೇಶಕರಾಗಿ ರತ್ನನ್ ಪ್ರಪಂಚ ಸೇರಿದಂತೆ ಹಲವು ಕನ್ನಡ ಸಿನೆಮಾಗಳಿಗೆ ಸಹಾಯಕ ನಿರ್ದೇಶಕರಾಗಿ, ಬರಹಗಾರರಾಗಿ ಕೆಲಸ ಮಾಡಿದ ಶರತ್ ಗೌಡ ಇದ್ದಾರೆ.

‘ಅಬ್ಬಬ್ಬ’ ಟೈಟಲ್ ಅಲ್ಲೇ ಒಂಥರಾ ಆಕರ್ಷಣೆ ಇದ್ದು, ಜನರನ್ನು ಪಕ್ಕಾ ರಂಜಿಸಲಿರುವ ಜಬರ್ದಸ್ತ್ ಕಾಮಿಡಿ ಸಿನೆಮಾ ಆಗಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ಬೆಂಗಳೂರು ಹಾಗೂ ತುಮಕೂರಿನಲ್ಲಿ ಚಿತ್ರೀಕರಣ ನಡೆದಿದ್ದು, ಜೂನ್ 9ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಮುಂದಿನ ತಿಂಗಳು (ಜುಲೈ) ಒಂದರಂದು ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಕೆ.ಎಂ.ಚೈತನ್ಯ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments