HomeMovieಹಲವು ವರ್ಷಗಳ ಬಳಿಕ ಮರಳಿದ ಕೋಮಲ್: ನಮೋ ಭೂತಾತ್ಮ 2 ಶುರು

ಹಲವು ವರ್ಷಗಳ ಬಳಿಕ ಮರಳಿದ ಕೋಮಲ್: ನಮೋ ಭೂತಾತ್ಮ 2 ಶುರು

ಬೆಂಗಳೂರು: ಹಲವು ವರ್ಷಗಳಿಂದ ಕಾಣೆಯಾಗಿದ್ದ ಕಾಮಿಡಿಯನ್ ಕಂ ಹೀರೋ ಕೋಮಲ್ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ. ಕೋಮಲ್ ಅಭಿನಯದ ನಮೋ ಭೂತಾತ್ಮ 2014ರಲ್ಲಿ ತೆರೆ ಕಂಡಿತ್ತು. ಇದೀಗ ಈ ಚಿತ್ರದ ಪಾರ್ಟ್ 2 ಮೂಲಕ ಕೋಮಲ್ ಮತ್ತೆ ಸ್ಯಾಂಡಲ್ವುಡ್ ನಲ್ಲಿ ಮಿಂಚಲು ಅಣಿಯಾಗಿದ್ದಾರೆ.

ನಮೋ ಭೂತಾತ್ಮ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್’ಗೆ ಪಾದಾರ್ಪಣೆ ಮಾಡಿದ್ದ ನೃತ್ಯ ಸಂಯೋಜಕ ಮುರಳಿ ಅವರು ಇದೀಗ ಮತ್ತೆ ನಮೋ ಭೂತಾತ್ಮ 2 ಮೂಲಕ ಕೋಮಲ್ ಜೊತೆಗೆ ಕೈಜೋಡಿಸಿದ್ದಾರೆ. ಚಿತ್ರವು ಹಾರರ್ ಕಾಮಿಡಿ ಚಿತ್ರವಾಗಿದ್ದು, ನಮೋ ಭೂತಾತ್ಮ ಚಿತ್ರದ ಮುಂದುವರೆದ ಭಾಗ ಇದಾಗಿದೆ.

ನಟ ಕೋಮಲ್ ಅವರೊಂದಿಗೆ ಲೇಖಾ ಚಂದ್ರ ಅವರು ನಾಯಕಿಯಾಗಿ ನಟಿಸಲಿದ್ದಾರೆ. ಲೇಖಾ ಅವರು ಪ್ರಜ್ವಲ್ ದೇವರಾಜ್ ಅಭಿನಯದ ಅಬ್ಬರ ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ. ಉಳಿದಂತೆ ಮಿಮಿಕ್ರಿ ಗೋಪಿ, ಮಹಂತೇಶ್, ಗೋವಿಂದೇಗೌಡ, ರುದ್ರೇಶ್ ಮತ್ತು ಮೋನಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಚಿತ್ರಕ್ಕೆ ಅರುಣ್ ಆಂಡ್ರ್ಯೂಸ್ ಸಂಗೀತ, ಹಾಲೇಶ್ ಎಸ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರೀಕರಣ ಸಂಪೂರ್ಣವಾಗಿ ಬೆಂಗಳೂರು ಸುತ್ತಮುತ್ತ ನಡೆಯಲಿದ್ದು, ಡಿಸೆಂಬರ್ 2 ರಂದು ನಮೋ ಭೂತಾತ್ಮ 2 ಚಿತ್ರೀಕರಣ ಆರಂಭವಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments