Movie

ಗೆದ್ದ ಬಾಯ್ಕಾಟ್ ಕ್ಯಾಂಪೇನ್: ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ ಲಾಲ್ ಸಿಂಗ್ ಚಡ್ಡಾ. ರಕ್ಷಾ ಬಂಧನಕ್ಕೂ ಸೋಲಿನ ರುಚಿ

ಮುಂಬಯಿ: ದೇಶದಾದ್ಯಂತ ಸಾಲು ಸಾಲು ರಜೆಗಳು ಇದ್ದರೂ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ, ಹಾಗು ಎಡಪರ ಚಿಂತನೆಯ ಹಲವು ಭಾರೀ ಹಿಂದೂ ವಿರೋಧಿ ಪೋಸ್ಟ್ ಹಾಕಿದ್ದ ಕಾನಿಕಾ ಧಿಲ್ಲೋನ್ ಬರವಣಿಗೆ ಇರುವ ರಕ್ಷಾ ಬಂಧನ್ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದ್ದು ಬಾಲಿವುಡ್ ಗೆ ಎಚ್ಚರಿಕೆ ಸಂದೇಶ ನೀಡಿದೆ. ಈ ಮೂಲಕ ದೇಶದಾದ್ಯಂತ ನಡೆದ ಹಿಂದೂಪರ ರಾಷ್ಟ್ರಪರ ಸಮೂಹದ ಬಾಯ್ಕಾಟ್ ಅಭಿಯಾನ ಯಶಸ್ವೀಯಾಗಿದೆ.

ಈ ಎರಡೂ ಚಿತ್ರಗಳು ಆಗಸ್ಟ್ 11 ಗುರುವಾರ ಬಿಡುಗಡೆಯಾಗಿದ್ದು ಸ್ವಾತಂತ್ರೋತ್ಸವ ಸೇರಿದಂತೆ ಐದು ದಿನಗಳ ಧೀರ್ಘ ರಜೆ ಇದ್ದರೂ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಸೋತು ಸುಣ್ಣವಾಗಿವೆ. ನಾಲ್ಕು ವರ್ಷಗಳ ನಂತರ ತೆರೆ ಕಂಡ ಅಮಿರ್ ಖಾನ್ ಅವರ ಲಾಲ್ ಸಿಂಗ್ ಅವರ ಸಿನಿಮಾ ಭಾರಿ ನಿರೀಕ್ಷೆ ಹುಟ್ಟು ಹಾಕಿತ್ತು. ೨೦೦ ಕೋಟಿಯಲ್ಲಿ ನಿರ್ಮಾಣವಾದ ಈ ಚಿತ್ರ 100 ಕೋಟಿ ಗಳಿಸುವುದೂ ಕಷ್ಟ ಎನ್ನಲಾಗುತ್ತಿದೆ.

ಅಮೀರ್ ಖಾನ್ ನ ಲಾಲ್ ಸಿಂಗ್ ಚಡ್ಡಾ ಬಿಡುಗಡೆಯಾದಾಗಿನಿಂದ ಸೋಮವಾರದವರೆಗೂ ಕೇವಲ 37. 96 ಕೋಟಿ ( 379. 6 ಮಿಲಿಯನ್ ) ಕಲೆಕ್ಷನ್ ಮಾಡಿದೆ. ರಕ್ಷಾ ಬಂಧನ್ ಕೂಡಾ ಚಿತ್ರ ಕೂಡಾ ಈವರೆಗೂ ಕೇವಲ 28. 16 ಕೋಟಿ ಮಾತ್ರ ಕಲೆಕ್ಷನ್ ಮಾಡಿದೆ. ಈ ಮೂಲಕ ಈ ದೇಶದ ಮೂಲ ನಿವಾಸಿಗಳಾದ ಹಿಂದೂಗಳ ವಿರುದ್ಧ ಹಾಗು ಈ ದೇಶದ ಮಣ್ಣಿನ ವಿರುದ್ಧ ನಿಂತರೆ ಜನ ಹೇಗೆ ಪಾಠ ಕಲಿಸುತ್ತಾರೆ ಅನ್ನುವುದು ಸಾಬೀತಾಗಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version